Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಮಕ್ಕಳ ಆಟಗಳು’ Category

ವಿಮಲ ಸೆಂಟು(?) ಬೆದರಿಮೆ ಬೆದರಿಮೆ
ಆದಿ ಕಮಲ ಜುಳ ಜುಳ
ನಿಮಗೆ ಯಾರು ಬೇಕಮ್ಮ ಬೇಕಮ್ಮ
ನಮಗೆ ಲಕ್ಷ್ಮಿ ಬೇಕಮ್ಮ ಬೇಕಮ್ಮ

ಈ ಹಾಡನ್ನು ಹಾಡುತ್ತ, ಎರಡು ಪಂಗಡಗಳು ತಮಗೆ ಬೇಕಾದವರನ್ನು ಆರಿಸುಕೊಳ್ಳುತ್ತಾರೆ. ಉದಾಹರಣೆಗೆ, ಅ ಮತ್ತು ಇ ಪಂಗಡಗಳಿವೆ ಎಂದುಕೊಳ್ಳೋಣ. ಪ್ರತಿ ಪಂಗಡದ ಎಲ್ಲರು ಒಬ್ಬರ ಕೈ ಇನ್ನೊಬ್ಬರು ಹಿಡಿದು ಒಂದು ಸರಪಳಿ ಯಂತೆ ನಿಲ್ಲಬೇಕು. ಹಾಡು ಶುರುವಾಗುವ ಮುನ್ನ ಎರಡು ಪಂಗಡ ಸರಪಳಿಗಳು ಎದುರುಬದುರಾಗಿ ನಿಲ್ಲಬೇಕು. ಮೊದಲಿಗೆ ಅ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ವಿಮಲ ಸೆಂಟು ಬೆದರಿಮೆ ಬೆದರಿಮೆ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಇ ಪಂಗಡ ಹಿಮ್ಮುಕವಾಗಿ ನಡೆಯಬೇಕು. ನಂತರ ಇ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ಆದಿ ಕಮಲ ಜುಳ ಜುಳ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಅ ಪಂಗಡ ಹಿಮ್ಮುಕವಾಗಿ ನಡೆಯಬೇಕು. ಇದಾದ ಮೇಲೆ ಅ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ನಿಮಗೆ ಯಾರು ಬೇಕಮ್ಮ ಬೇಕಮ್ಮ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಇ ಪಂಗಡ ಹಿಮ್ಮುಕವಾಗಿ ನಡೆಯಬೇಕು. ಕೊನೆಗೆ ಇ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ನಮಗೆ ಲಕ್ಷ್ಮಿ ಬೇಕಮ್ಮ ಬೇಕಮ್ಮ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಅ ಪಂಗಡ ಹಿಮ್ಮುಕವಾಗಿ ನಡೆಯಬೇಕು. ಆಗ ಅ ಪಂಗಡದ ‘ಲಕ್ಷ್ಮಿ’ ಹುಡುಗಿ ಇ ಪಂಗಡ ಸೇರುತ್ತಾಳೆ. ಹೇಗೆ ಮುಂದುವರೆದು ಎರಡು ಪಂಗಡಗಳು ತಮಗೆ ಬೇಕಾದವರನ್ನು ಆರಿಸಿಕೊಂಡು ಕೊನೆಗೆ ಎರಡು ತಂಡಗಳು ಮುಂದಿನ ಆಟ ಆಡಲು ತಯಾರಾಗಬಹುದು.

ನಿಮಗೆ ತಿಳಿದಂತೆ ಮೇಲಿನ ಪದ್ಯದಲ್ಲಿ ತಪ್ಪಿದ್ದರೆ, ಅಥವಾ ಬೇರೆ ಪದಗಳಿದ್ದಲ್ಲಿ ದಯವಿಟ್ಟು ತಿಳಿಸಿ.

Read Full Post »

« Newer Posts