ವಸುದೇಂದ್ರ

ಲೇಖಕರ ಪರಿಚಯ:

ಕನ್ನಡದ ಇತ್ತೀಚಿನ ಬರಹಗಾರರಲ್ಲಿ ವಸುಧೇಂದ್ರ ಅವರ ಹೆಸರು ಪ್ರಮುಖವಾಗಿದೆ. ತಮ್ಮ ಸಣ್ಣ ಕತೆಗಳಿಂದ ಪ್ರಸಿದ್ದರಾದ ವಸುದೇಂದ್ರ ಅವರು, ತಮ್ಮ ಕತೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸ ಹೊಸ ವಿಷಯಗಳನ್ನು ಕುರಿತಾದ ಕತೆ, ಕಾದಂಬರಿ, ಪ್ರಬಂಧ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

 ಜನನ ಬಾಲ್ಯ:

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ವಸುದೇಂದ್ರ ಅವರ ಜನನವಾಯಿತು.

 ವಿದ್ಯಾಭ್ಯಾಸ:

ಇವರು ಅಭಯಂತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದವರು. 

 ಕನ್ನಡ ಸಾಹಿತ್ಯಕ್ಕೆ ವಸುದೇಂದ್ರ ಅವರ ಕೊಡುಗೆಗಳು:

ತಮ್ಮ ಸಣ್ಣ ಕತೆಗಳಿಂದ ವಸುದೇಂದ್ರ ಅವರು ಪ್ರಸಿದ್ದರಾದರು. ಹಲವು ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ. ಹರಿಚಿತ್ತ ಸತ್ಯ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪ್ರಶಸ್ತಿ, ದ ರಾ ಬೇಂದ್ರೆ ಕತೆ ಪ್ರಶಸ್ತಿ, ಮಾಸ್ತಿ ಕತೆ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ದೊರೆತಿರುತ್ತದೆ.

 ಕೃತಿಗಳು:

ಸಣ್ಣ ಕಥೆಗಳು

೧. ಮನೀಷೆ

೨. ಉಗಾದಿ

೩. ಚೇಳು

೩. ಹಂಪಿ ಎಕ್ಸ್ ಪ್ರೆಸ್

೪. ಮೊಹನಸ್ವಾಮಿ.

 ಪ್ರಬಂಧ ಸಂಕಲನ

೧. ನಮ್ಮಮ್ಮ ಅಂದ್ರೆ ನಂಗಿಷ್ಟ

೨. ರಕ್ಷಕ ಅನಾಥ

೩. ವರ್ಣಮಯ

೪. ಕೋತಿಗಳು ಸಾರ್ ಕೋತಿಗಳು

 ಕಾದಂಬರಿ:

೧. ಹರಿಚಿತ್ತ ಸತ್ಯ

 ಅನುವಾದಿತ ಕೃತಿ

ಮಿಥುನ

ಎವರೆಸ್ಟ್

 ಪ್ರಶಸ್ತಿ- ಪುರಸ್ಕಾರ:

ಕನ್ನಡ ಸಾಹಿತ್ಯ ಪ್ರಶಸ್ತಿ

ದ ರಾ ಬೇಂದ್ರೆ ಕತೆ ಪ್ರಶಸ್ತಿ

ಮಾಸ್ತಿ ಕತೆ ಪ್ರಶಸ್ತಿ

ಡಾ. ಯು ಅರ್ ಅನಂತಮೂರ್ತಿ ಪ್ರಶಸ್ತಿ

ಬೆಸಗರಳ್ಳಿ ರಾಮಣ್ಣ ಪ್ರಶಸ್ತ

ವಸುದೇವ ಭೂಪಾಲಂ ಪ್ರಶಸ್ತಿ

ವರ್ಧಮಾನ ಉದಯೋನ್ಮುಖ ಪ್ರಶಸ್ತಿ

ಕಥಾರಂಗ ಪ್ರಶಸ್ತಿ

ಗೊರೂರು ರಾಮಸ್ವಾಮಿ ಅಯ್ಯಂಗಾರ್ (1904–1991)

ಲೇಖಕರ ಪರಿಚಯ:

ಕನ್ನಡದ ಹಾಸ್ಯ ಬರಹಗಳಲ್ಲಿ ಗೋರೂರರ ಹೆಸರು ಅಜರಾಮರ. ತಮ್ಮ ತಿಳಿ ಹಾಸ್ಯದ ಪ್ರಬಂಧ ಹಾಗು ಕತೆಗಳಿಂದ ಕನ್ನಡಿಗರ ಮನಸ್ಸನ್ನು ಸೂರೆಗೊಂಡವರು ಗೊರೂರು ರಾಮಸ್ವಾಮಿ ಅಯ್ಯಂಗಾರ್.

 ಜನನ ಬಾಲ್ಯ:

ಗೊರೂರ ಅವರು ಹಾಸನ ಜಿಲ್ಲೆಯ ಗೊರೂರಿನಲ್ಲಿ ೧೯೧೪ರಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ್ ಅಯ್ಯಂಗಾರ್ ಹಾಗು ತಾಯಿ ಲಕ್ಷ್ಮಮ್ಮ.

 ವಿದ್ಯಾಭ್ಯಾಸ:

ಗೊರೂರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದರು. ಇವರು ’ಬ್ರಿಟೀಷರೇ ಭಾರತ ಬಿಟ್ಟು ತೊಲಗಿ” ಚಳುವಳಿಯಲ್ಲಿ ಭಾಗವಹಿಸಿ, ಅದಕ್ಕಾಗಿ ಜೈಲುವಾಸವನ್ನು ಅನುಭವಿಸಿದ್ದರು. ಹಾಗೆ ಇದೇ ಚಳುವಳಿಯಲ್ಲಿ ತಮ್ಮ ಮಗ ರಾಮಚಂದ್ರ ಅವರನ್ನು ಕಳೆದುಕೊಂಡರು.

 ಕನ್ನಡ ಸಾಹಿತ್ಯಕ್ಕೆ ಗೊರೂರು ಅವರ ಕೊಡುಗೆಗಳು:

ಕನ್ನದ ಸಾಹಿತ್ಯಕ್ಕೆ ತಿಳಿ ಹಾಸ್ಯ ಶೈಲಿಯ ಪ್ರಬಂಧ ಹಾಗು ಕತೆ ಗಳನ್ನು ಕೊಟ್ಟಿರುವುದು ಗೊರೂರರ ವಿಶೇಷವಾಗಿದೆ. ಇವರು ಹೇಮಾವತಿ ಹಾಗು ಊರ್ವಶಿ ಎಂಬ ಕಾದಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟಿದ್ದಾರೆ. ಇವರ ಅಮೇರಿಕಾದಲ್ಲಿ ಗೊರೂರು, ಕನ್ನಡ ಪ್ರವಾಸಸಾಹಿತ್ಯದಲ್ಲಿ ಇಂದಿಗೂ ಅತ್ಯುತ್ತಮ ಕೃತಿಯಾಗಿದೆ.

 ಕೃತಿಗಳು:

ಪ್ರಬಂಧಗಳು:

೧. ಹಳ್ಳಿಯ ಚಿತ್ರಗಳು

೨. ನಮ್ಮ ಊರಿನ ರಸಿಕರು

೩. ಪುಟ್ಟ ಮಲ್ಲಿಗೆ

೪. ಗರುಡ ಗಂಬದ ದಾಸಯ್ಯ

೫. ಮೆರವಣಿಗೆ

 ಸಣ್ಣ ಕತೆ:

ಭೂತಯ್ಯನ ಮಗ ಅಯ್ಯು

ಪ್ರವಾಸ ಸಾಹಿತ್ಯ:

ಅಮೇರಿಕಾದಲ್ಲಿ ಗೊರೂರು

 ಕಾದಂಬರಿಗಳು

೧. ಹೇಮಾವತಿ

೨. ಊರ್ವಶಿ

 ಪ್ರಶಸ್ತಿ- ಪುರಸ್ಕಾರ:

ಇವರ ಅಮೇರಿಕಾದಲ್ಲಿ ಗೊರೂರು ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುತ್ತದೆ.

ಟಿ.ಪಿ. ಕೈಲಾಸಂ

ಲೇಖಕರ ಪರಿಚಯ:

ತಂಜಾವುರ್ ಪರಮಶಿವ ಕೈಲಾಸಂ (೧೮೮೪-೧೮೪೬) ರವರು ಕನ್ನಡದ ಪ್ರಸಿದ್ದ ಹಾಸ್ಯ ನಾಟಕಕಾರರು. ಕನ್ನಡಕ್ಕೊಬ್ಬನೇ ಕೈಲಾಸಂ ಎಂಬ ಮಾತು, ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ಪ್ರಮುಖವಾಗಿ ನಾಟಕಗಳಲ್ಲಿ ಕೈಲಾಸಂ ಅವರ ಸ್ಥಾನವನ್ನು ತೋರಿಸುತ್ತದೆ. ಪುರಾಣಪ್ರಧಾನವಾಗಿದ್ದ ನಮ್ಮ ನಾಟಕ ಪ್ರಪಂಚ ವನ್ನು ತಮ್ಮ ಸಾಮಾಜಿಕ ನಾಟಕಗಳಿಂದ ಬದಲಾಯಿಸಿ, ಒಂದು ಹೊಸ ಮಾರ್ಗವನ್ನು ಹಾಕಿಕೊಟ್ಟವರು ಕೈಲಾಸಂ.

 ಜನನ ಬಾಲ್ಯ:

ಕೈಲಾಸಂ ಅವರು ೧೮೮೪ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಪರಮಶಿವಂ ಅಯ್ಯರ್ ಅವರು  ಮೈಸೂರಿನ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದರು. ಕೈಲಾಸಂ ಅವರು ಭೂವಿಜ್ಞಾನದಲ್ಲಿ ಪದವಿಯನ್ನು ಪಡೆದಿರುತ್ತಾರೆ.

 ವಿದ್ಯಾಭ್ಯಾಸ:

ಕೈಲಾಸಂ ಅವರ ತಂದೆ, ಇವರನ್ನು ಭೂವಿಜ್ಞಾನದಲ್ಲಿನ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಕಳಿಸುತ್ತಾರೆ. ಆದರೆ ಅಲ್ಲಿ ಅವರು ತಮ್ಮ ವಿದ್ಯಾಭ್ಯಾಸಕ್ಕಿನ್ನ ಹೆಚ್ಚಾಗಿ ನಾಟಕಗಳ ಬಗ್ಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಿಂದಿರುಗಿ ಭಾರತಕ್ಕೆ ಮರಳಿ ಭೂವಿಜ್ಞಾನಿಯಾಗಿ ಕೆಲಸಕ್ಕೆ ಸೇರುತ್ತಾರೆ.

 ಕನ್ನಡ ಸಾಹಿತ್ಯಕ್ಕೆ ಕೈಲಾಸಂ ಅವರ ಕೊಡುಗೆಗಳು:

ಕೈಲಾಸಂ ಅವರು ಸಾಮಾಜಿಕ ಸಮಸ್ಯಗಳನ್ನು ಕುರಿತಾದ ನಾಟಕಗಳ ರಚನೆಯಲ್ಲಿ ತೊಡಗುತ್ತಾರೆ. ಆಡುಭಾಷೆಯಲ್ಲಿರುವ ಇವರ ನಾಟಕಗಳು ಸಾಮಾಜಿಕವಾಗಿ ಒಂದು ಕ್ರಾಂತಿಯನ್ನು ಎಬ್ಬಿಸಿದವು ಹಾಗೆ ಕೈಲಾಸಂ ಅವರಿಗೆ ಖ್ಯಾತಿ ತಂದುಕೊಟ್ಟವು. ೧೯೪೫ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರ ನಾಟಕಗಳು ಕನ್ನಡ ನಾಟಕ ಪ್ರಪಂಚದ ಅತಿ ಮುಖ್ಯವಾದ ಸ್ಥಾನ ಪಡೆದಿವೆ. ಕೈಲಾಸಂ ಅವರನ್ನು ಕನ್ನಡ ನಾಟಕ ಪ್ರಹಸನ ಪಿತಾಮಹ ಎಂದು ಕರೆಯುವುದು, ಅವರಿಗೆ ದೊರೆತ ಅತಿ ಸೂಕ್ತವಾಗಿ ಸನ್ಮಾನ ಎನ್ನಬಹುದು

 ಕೃತಿಗಳು:

ನಾಟಕಗಳು

೧. ಪೋಲಿ ಕಿಟ್ಟಿ

೨. ಹೋಂ ರೂಲ್

೩. ಅಮ್ಮಾವ್ರ ಗಂಡ

೪. ಏಕಲವ್ಯ

 

ಇಂಗ್ಲೀಶ್ ನಾಟಕಗಳು

೧. The Purpose

೨. Fulfilment

೩. The Burden

೪. The Brahmin’s Curse

 

Poems

೧. The Dramatist

೨. Eternal Cain

೩. Truth Naked

೪. The Lake

೫. Mother-Love

೬. The Sixth Columnist 1943

೭. A Monologue

೮. The Recipe

೯. The Smilin’ Seven

೧೦. The Artist

೧೧. Kaikeyee

೧೨. Commiseration (Karna)

೧೩. Drona

೧೪. Krishna

೧೫. Subhadra

ಚದುರಂಗ

ಲೇಖಕರ ಪರಿಚಯ:

ಸುಬ್ರಮಣ್ಯ ರಾಜೇ ಅರಸ್ ಅವರ ಕಾವ್ಯನಾಮ ಚದುರಂಗ. ಕನ್ನಡದ ಕಾದಂಬರಿಕಾರರಲ್ಲಿ ಚದುರಂಗ ಅವರು ಪ್ರಮುಖರು. ಇವರ ಎರಡು ಕಾದಂಬರಿಗಳು (ಸರ್ವಮಂಗಳ ಹಾಗು ಉಯ್ಯಾಲೆ) ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳಾಗಿ ತಯಾರಾಗಿವೆ.  

 ಜನನ ಬಾಲ್ಯ:

ಮೈಸೂರು ಅರಸರ ವಂಶಕ್ಕೆ ಸೇರಿದ ಸುಬ್ರಮಣ್ಯ ರಾಜೇ ಅರಸ್ ಅವರು ಹುಣುಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1916 ರಲ್ಲಿ ಜನಿಸಿದರು. ಇವರ ತಂದೆ ಮುದ್ದು ರಾಜ ಅರಸ್ ಅವರು ತಲಕಾಡಿನ ಗಂಗರಾಜರ ವಂಶದವರು. ಇವರ ತಾಯಿ ಮರುದೇವಮ್ಮಣ್ಣಿ ಅವರು ಮಂಗರಸರ ವಂಶಕ್ಕೆ ಸೇರಿದವರು. ಮಂಗರಸರು ಕಲ್ಲಹಳ್ಳಿ ರಾಜರಗಿದ್ದವರು. ಚದುರಂಗರ ವಂಶಸ್ಥರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಚದುರಂಗ ಆಟದ ಪ್ರವೀಣರಾಗಿದ್ದರಂತೆ. ಚದುರಂಗರೂ ಕೂಡ ಚದುರಂಗ ಆಟದಲ್ಲಿ ಪರಿಣತಿಯನ್ನು ಹೊಂದಿದ್ದು, ಅದನ್ನೇ ತಮ್ಮ ಕಾವ್ಯನಾಮವನ್ನಾಗಿ ಇರಿಸಿಕೊಂಡರು.

 ವಿದ್ಯಾಭ್ಯಾಸ:

ಚದುರಂಗರು ಕಲ್ಲಹಳ್ಳಿಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಶುರುಮಾಡಿದರು. ಇವರು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೋತೆಗೆ ತಮ್ಮ ವಿದ್ಯಾಭ್ಯಾಸ ಮಾಡಿದರು.  ಚದುರಂಗರು ಪದವಿ ಮುಗಿದ ನಂತರ ಪುಣೆಗೆ ಹೋಗಿ ಅಲ್ಲಿ ಕಾನೂನು ಪದವಿಗೆ ಸೇರಿ ಕೊಂಡರು. ಆದರೆ ಕಾರಣಾಂತರಗಳಿಂದ ಕಾನೂನು ಪದವಿಯನ್ನು ಮುಗಿಸದೆ, ಮೈಸೂರಿಗೆ ಹಿಂದಿರುಗಿದರು. ಗಾಂಧೀಜಿಯ ಪ್ರಭಾವಕ್ಕೆ ಒಳಗಾದ ಚದುರಂಗರು ತಮ್ಮನ್ನು ತಾವೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡದ್ದಲ್ಲದೆ, ಅಂದಿನಿಂದ ಖಾದಿ ಬಟ್ಟೆಗಳನ್ನು ತೊಡಲು ಆರಂಭಿಸುತ್ತಾರೆ. ಇವರು ತಮ್ಮ ಗುರುಗಳಾದ ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ.ಪಿ.ರಾಜರತ್ನಂ ಅವರುಗಳಿಂದ ಪ್ರಭಾವಿತರಾಗಿ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡರು.

 ಕನ್ನಡ ಸಾಹಿತ್ಯಕ್ಕೆ ಚದುರಂಗ ಅವರ ಕೊಡುಗೆಗಳು:

ಮೊದಲಿಗೆ ಸಣ್ಣ ಕತೆಗಳನ್ನು ಬರಯಲು ಶುರುಮಾಡಿದ ಇವರು ನಂತರ ಕೆಲವು ರೇಡಿಯೋ ನಾಟಕಗಳನ್ನು ಬರೆದು ಪ್ರಸಿದ್ದರಾಗಿದ್ದರು. ಇವರು ಮುಖ್ಯವಾಗಿ ಕಾದಂಬರಿಕಾರರು, ನಾಲ್ಕು ಪ್ರಮುಖ ಕಾದಂಬರಿಗಳನ್ನು ಇವರು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸರ್ವಮಂಗಳ ಹಾಗು ಉಯ್ಯಾಲೆ ಚಲನಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇವರು ಕುವೆಂಪು ಹಾಗು ವೆಂಕಟಲಕ್ಷ್ಮಮ್ಮ ಅವರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ.

 ಕೃತಿಗಳು:

ಕಾದಂಬರಿಗಳು

೧. ಸರ್ವಮಂಗಳ

೨. ಉಯ್ಯಾಲೆ

೩. ವೈಶಾಖ

೪. ಹೆಜ್ಜಾಲ

 ಪ್ರಶಸ್ತಿ- ಪುರಸ್ಕಾರ:

ಚದುರಂಗ ಅವರ ಸರ್ವಮಂಗಳ ಕಾದಂಬರಿಗೆ ೧೯೮೨ ರಲ್ಲಿ ಕೇಂದ್ರಿಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುತ್ತದೆ. ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದೆ. ಇವರು ೬೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ತ. ರಾ. ಸುಬ್ಬರಾವ್

ಲೇಖಕರ ಪರಿಚಯ

ತರಾಸು ಎಂದೆ ಜನಪ್ರೀಯವಾಗಿರುವ ತಳುಕಿನ ರಾಮಸ್ವಾಮಿ ಸುಬ್ಬರಾವ್ (೧೯೨೦ – ೧೯೮೪), ಅವರು ಕನ್ನಡದ ಸುಪ್ರಸಿದ್ದ ಕಾದಂಬರಿಕಾರರು ಹಾಗು ಕನ್ನಡದ ನವ್ಯ ಚಳುವಳಿಯ ಹರಿಕಾರರೂ ಆಗಿದ್ದರು. ಇವರ ದುರ್ಗಾಸ್ತಮಾನ ಕಾದಂಬರಿಗೆ ಮರಣಾನಂತರ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ದೊರಕಿತು.

 ಜನನ ಮತ್ತು ಬಾಲ್ಯ

ಕರ್ನಾಟಕದ ಮಾಲೆಬೆನ್ನೂರಿನಲ್ಲಿ ತರಾಸು ಅವರು ೨೧ನೆ ಎಪ್ರಿಲ್ ೧೯೨೦ ರಲ್ಲಿ ಜನಿಸಿದರು. ತರಾಸು ಅವರ ತಂದೆ ರಾಮಸ್ವಾಮಿ ಅವರು ಹರಿಹರದಲ್ಲಿ ಲಾಯರ್ ಆಗಿದ್ದರು. ತರಾಸು ಅವರ ತಾಯಿ ಸೀತಮ್ಮ. ತರಾಸು ಅವರ  ತಾತಸುಬ್ಬಣ್ಣನವರು ೮ ವರ್ಷದವರಾಗಿದ್ದಾಗ ಆಂಧ್ರ ಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ಕನ್ನಡದ ಸುಪ್ರಸಿದ್ದ ಹಾಗು ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯ, ತರಾಸು ಅವರ ಚಿಕ್ಕಪ್ಪ. ತರಾಸು ಅವರು “ಪುಟ್ಟನ ಚೆಂಡು” ಎಂಬ ಕೃತಿಯನ್ನು. ತನ್ನ ಚಿಕ್ಕಪ್ಪನೋಡನೆ ಮಾಡಿಕೊಂಡ ಪಂದ್ಯಕ್ಕೋಸ್ಕರ ಬರೆದಿದ್ದು. ತರಾಸು ಅವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ, ಚಿತ್ರದುರ್ಗದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದೇಶಭಕ್ತಿ ಗೀತೆಯನ್ನು ಹಾಡುವುದು ಹಾಗು ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡುತ್ತಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಕಾಣಿಕೆಯನ್ನು ನೀಡಿರುತ್ತಾರೆ. ಬಾಗೂರು ಎಂಬ ಹಳ್ಳಿಯಲ್ಲಿ ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡುತ್ತಿರುವಾಗ ಅವರನ್ನು ಬಂದಿಸಿ, ಜೈಲಿಗೆ ಹಾಕುತ್ತಾರೆ. ಇದರಿಂದ ತರಾಸು ಅವರ ತಂದೆ ರಾಮಸ್ವಾಮಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಮಗನನ್ನು ಕಂಡು,  ಎಲ್ಲಿ ಆತನ ವಿಧ್ಯಾಭ್ಯಾಸ ಹಾಳಾಗುವುದೋ ಎಂದು, ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಸೇರಿಸುತ್ತಾರೆ. ಅಲ್ಲಿಂದ ನಂತರ ಶಿವಮೊಗ್ಗ ಹಾಗು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಯುತ್ತದೆ. ಆದರೆ ತರಾಸು ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅದರ ಭಾಗವಾಗಿ ಶಾಲಾ ಪಾಠವನ್ನು ಬಹಿಷ್ಕರಿಸಿದ್ದರು. ಕೊನೆಗೆ ಬ್ರಿಟೀಶರಿಗೆ ’ಭಾರತ ಬಿಟ್ಟು ತೊಲಗಿ’ ಎಂದು ಕರೆಕೊಟ್ಟು ಚಳುವಳಿ ಅರಂಭಿಸಿದ ಗಾಂದಿಯವರ ಕರೆಗೆ ಓಗೊಟ್ಟು, ತಾವು ಚಳುವಳಿಯಲ್ಲಿ ಭಾಗವಹಿಸಿ, ಜೈಲನ್ನು ಸೇರುತ್ತಾರೆ. ತರಾಸು ಅವರು ೧೯೪೨ರ ಡಿಸೆಂಬರ್ ನಲ್ಲಿ  ಜೈಲಿನಿಂದ ಹೊರಬರುತ್ತಾರೆ. ಜೈಲಿನಿಂದ ಹೊರಬಂದ ಮೇಲೆ, ಭಾರತ ಸ್ವತಂತ್ರ್ಯ ವನ್ನು ಪಡೆಯುವ ವರೆಗೆ ತಾವು ಮತ್ತೆ ತರಗತಿಗೆ ಸೇರುವುದಿಲ್ಲ ಎಂದು ಮನಸ್ಸು ಮಾಡುತ್ತಾರೆ. ತರಾಸು ಅವರು ಮೊದಲು ನಾಸ್ತಿಕರಗಿದ್ದು ನಂತರ ಆಸ್ತಿಕರಾಗಿ ಪರಿವರ್ತಿತರಾಗುತ್ತಾರೆ.

 ವಿದ್ಯಾಭ್ಯಾಸ

ತರಾಸು ಅವರು ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು

 ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳು

ತರಾಸು ಅವರು ಕನ್ನಡದಲ್ಲಿ ಕಾದಂಬರಿಕಾರರಾಗಿ ಸುಧೀರ್ಘ ಕಾಲ ತೊಡಗಿಸಿಕೊಂಡವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ತೆರೆಗೆ ಬಂದ ಹಲವಾರು ಕನ್ನಡದ ಚಲನಚಿತ್ರಗಳು ಹೆಸರು ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವು, ಚಂದವಳ್ಳಿಯ ತೋಟ, ಹಂಸಗೀತೆ, ನಾಗರಹಾವು, ಬೆಂಕಿಯ ಬಲೆ,

ಗಾಳಿಮಾತು, ‘ಬಿಡುಗಡೆಯ ಬೇಡಿ‘, ಮಸಣದ ಹೂ ಇತ್ಯಾದಿ. ಇವರಹಂಸಗೀತೆಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ಬಸಂತ್ ಬಹಾರ್ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಸುಪ್ರಸಿದ್ಧ ಹಿಂದಿ ಸಾಹಿತಿ ರಾಜೇಂದ್ರ ಸಿಂಹ್ ಬೇಡಿಯವರ ಸಂಭಾಷಣೆಗಳು, ಶೈಲೇಂದ್ರ ಮತ್ತು ಹಸ್ರತ್ ಜೈಪುರಿಯವರ ಗೀತೆಗಳು, ಶಂಕರ್-ಜೈಕಿಶನ್ ರ ಸಂಗೀತ ಮತ್ತು ರಾಜಾ ನವಾಥೆಯವರ ನಿರ್ದೇಶನವಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಭರತ್ ಭೂಷಣ್, ನಿಮ್ಮಿ, ಓಮ್ ಪ್ರಕಾಶ್, ಕುಂಕುಮ್, ಮನ್ ಮೋಹನ್ ಕೃಷ್ಣ, ಮುಂತಾದವರಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಜಯಪ್ರದವಾಗಿತ್ತು.

 ಕೃತಿಗಳು:

ಇವರ ಪ್ರಮುಖ ಕಾದಂಬರಿಗಳು

·       ನಾಗರಹಾವು

·       ಗಾಳಿಮಾತು

·       ಕಸ್ತೂರಿ ಕಂಕಣ

·       ಕಂಬನಿಯ ಕುಯಿಲು

·       ರಾಜ್ಯದಾಹ

·       ರಕ್ತರಾತ್ರಿ

·       ತಿರುಗುಬಾಣ

·       ಹೊಸ ಹಗಲು

·       ವಿಜಯೋತ್ಸವ

·       ನೃಪತುಂಗ

·       ಸಿಡಿಲ ಮೊಗ್ಗು

·       ಚಂದವಳ್ಳಿಯ ತೋಟ

·       ಎರಡು ಹೆಣ್ಣು ಒಂದು ಗಂಡು

·       ಮಾರ್ಗದರ್ಶಿ

·       ಆಕಸ್ಮಿಕ

·       ಅಪರಾಧಿ

·       ಹಂಸಗೀತೆ

·       ಬಿಡುಗಡೆಯ ಬೇಡಿ

ಪ್ರಶಸ್ತಿ- ಪುರಸ್ಕಾರ:

ಇವರ ದುರ್ಗಾಸ್ತಮಾನ ಕೃತಿಗೆ ೧೯೮೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.