Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2010

ಕನ್ನಡ್ ಪದಗೊಳ್

ಕವಿ : ರಾಜರತ್ನಂ

ಎಂಡಾ ಎಡತಿ ಕನ್ನಡ್ ಪದ್ಗೊಳ್ ಅಂದ್ರೆ ರತ್ನಂಗ್ ಪ್ರಾಣ
ಬುಂಡೇನೆತ್ತಿ ಕುಡಿದ್ ಬುಟ್ಟಾಂದ್ರೆ ತಕ್ಕೊ ಪದ್ಗೊಳ್ ಬಾಣ

ಭಗವಂತೇನ್ರಾ ಭೂಮಿಗಿಳ್ದು ನಮ್ತಾಕ್ ಬಂದಂತಾನ್ನು
ಪರ್ ಗಿರಿಕ್ಷೆ ಮಾಡ್ತಾನವ್ನು ಭಕ್ತನ್ ಮೇಲ್ ಅವನ್ ಕಣ್ಣು

ಎಂಡಾ ಕುಡಿಯೊದ್ ಬುಟ್ಬುಡ್ ರತ್ನಾಂತ್ ಅವನೇನಾರಂದ್ರೆ
ಮೂಗ್ ಮೂರ್ ಚೂರಾಗಿ ಮುರಸ್ಕೊಂತೀನಿ ದೇವರ್ ಮಾತ್ಗಡ್ ಬಂದ್ರೆ

ಎಂಡ ಬುಟ್ಟೆ ಎಡ್ತೀನ ಬುಟ್ ಬುಡ್ ರತ್ನಂತ್ ಅವನೇನಾರಂದ್ರೆ
ಕಳ್ದೊಯ್ತಂತ ಕುಣ್ದಾಡ್ತೀನಿ ದೊಡ್ದೊಂದ್ ಕಾಟಾ ತೊಂದ್ರೆ

ಎಂಡಾ ಬುಟ್ಟೆ ಏಡ್ತಿ ಬುಟ್ಟೇ ಕನ್ನಡ್ ಪದ್ಗೋಳ್ನ ಆಡೊದ್ ಬುಟ್ಬುಡ್ ರತ್ನ
ಅಂತ ಅವನೇನಾರಂದ್ರೆ, ದೇವರೇ ಆದ್ರೇನು ಮಾಡ್ತೀನವಂಗೆ ಖತ್ನ

ಆಗ್ನೇ ಮಾಡೊ ಐಗೊಳೆಲ್ಲಾ ದೇವ್ರೇ ಆಗ್ಲಿ ಎಲ್ಲಾ
ಕನ್ನಡ್ ಸುದ್ದೀಗೇನ್ರಾ ಬಂದ್ರೆ ಮಾನಾ ಉಳೀಸಾಕಿಲ್ಲಾ

ನರಕಕ್ಕಿಳಿಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ನನ್ ಮನಸನ್ನೀ ಕಾಣೆ

ಎಂಡಾ ಒಗ್ಲಿ ಎಡ್ತೀ ಒಗ್ಲಿ ಎಲ್ಲಾಕೊಚ್ಕೊಂಡ್ ಒಗ್ಲಿ
ಪರ್ಪಂಚ್ ಇರೊತಂಕ ಮುಂದೆ ಕನಡ್ ಪದ್ಗೋಳ್ ನುಗ್ಲಿ

Read Full Post »

ಯೊಳ್ಕಳಕ್ ಒಂದೂರು

ಕವಿ : ರಾಜರತ್ನಂ

ಯೊಳ್ಕಳಕ್ ಒಂದೂರು ತಲೆಮ್ಯಾಗೊಂದು ಸೂರು
ಮಲ್ಗಕೆ ಭೂಮ್ತಾಯಿ ಮಂಚ|
ಕೈ ಇಡ್ದೋಳ್ ಪುಟ್ನಂಜಿ ನೆಗ್ನೆಗ್ತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪ್ರಪಂಚ||

ಅಗ್ಲೆಲ್ಲ ಬೆವರ್ಸುರ್ಸಿ ತಂದಿದ್ರಲ್ ಓಸಿಮುರ್ಸಿ
ಸಂಜೇಲಿ ಉಳಿ ಯೆಂಡ ಕೊಂಚ |
ಈರ್ತ ಮೈ ಜುಮ್ ಅಂದ್ರೆ ವಾಸ್ನೆ ಘಮ್ ಘಮ್ ಅಂದ್ರೆ
ತುಂಬೊಯ್ತು ರತ್ನನ್ ಪ್ರಪಂಚ||
                                                                    || ಯೊಳ್ಕಳಕ್ ಒಂದೂರು||
ದುಖ್ಖಿಲ್ಲ ದಾದಿಲ್ಲ ನಮ್ಗದ್ರಲ್ಲ್ ಪಾಲಿಲ್ಲ
ನಾವ್ಕಂಡಿಲ್ಲ ತಂಚ ವಂಚ|
ಆಕಾಶ್ದಲ್ಲಿ ಹಾರಾಡ್ತ ಕನ್ನಡ್ದಲ್ಲಿ ಪದವಾಡ್ತ
ಬಾಳೊದೇ ರತ್ನನ್ ಪ್ರಪಂಚ||
                                                                    || ಯೊಳ್ಕಳಕ್ ಒಂದೂರು||
ದೇವ್ರೆನ್ರ ಕೊಡ್ಲಣ್ಣ ಕೊಡದಿದ್ರೆ ಬಿಡ್ಲಣ್ಣ
ನಾವೆಲ್ಲ ಅವ್ನೀಗೆ ಬಚ್ಚ |
ಅವ್ನಾಕಿದ್ ತಾಳ್ದಂಗೆ ಕಣ್ಣ್ಮುಚ್ಕೊಂಡ್ ಯೊಳ್ದಂಗೆ
ನಡೆಯೊದೆ ರತ್ನನ್ ಪ್ರಪಂಚ||
                                                                    || ಯೊಳ್ಕಳಕ್ ಒಂದೂರು||

Read Full Post »

ಕವಿ : ರಾಜರತ್ನಂ

ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ
ಭೂಮಿಯುದ್ದಕ್ ಬೊಗ್ಗಿಸ್ತೀನಿ ಎಂಡ ತುಂಬ್ಕೊಂಡ್ ಮೈನ
                              ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ

ಬುರ್ ಬುರ್ ನೊರೆ ಬಸಿಯೊ ಅಂತ ವಳ್ಳೆ ವುಳಿ ಎಂಡ
ತರ್ತೀನ್ ನಂದು ಪ್ರಾರ್ಥನೆ ಕೇಳೋ ಸರ್ಸೊತಮ್ಮನ್ ಗಂಡಾ
ಸರ್ಸೊತಮ್ಮ ಮುನಿಸ್ಕೊಂಡವ್ಳೆ ನೀನಾದ್ರ್ ವಸಿ ಎಳು
ಕುಡುದ್ ಬುಟ್ಟಾಡ್ದ್ರೆ ತೊಲ್ತದಣ್ಣ ನಾಲ್ಗೆ ಬಾಳ ಗೋಳು

                             ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ

ಅಕ್ಸರನೆಲ್ಲಾ ಸರ್ಸೊತಮ್ಮ ಪಟ್ಟಾಗಿಟ್ ಕೊಂಡುಬುಟ್ಟು
ಮುನಿಯಾ ಎಂಡಾ ಬಿಡುವಂಗೇನೆ ಬಿಡ್ತಾಳ್ ಅವಳ್ ಕೈ ಗಟ್ಟಿ
ಮುನಿಯಂಗಾನಾ ಕಾಸೋಗ್ತೈತೆ ಹೆಚ್ಗೆ ಎಂಡಾ ಬಿಟ್ಟ್ರೆ
ಸರ್ಸೊತಮ್ಮಂಗೇನೊಗ್ತೈತೆ ಮಾತ್ ಸಲೀಸಾಗ್ ಕೊಟ್ಟ್ರೆ

                                 ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ

ನಂಗೆ ನೀನು ಲಾಯ್ರಿಯಾಗಿ ನನ್ ಕೇಸ್ ಗೀಸ್ ಗೆದ್ ಗಿದ್ ಕೊಟ್ರೆ
ಮಾಡ್ತೀನಪ್ಪನಿನ್ನೊಟ್ಟೇನ ಹುಳಿ ಎಂಡದ್ ಪೊಟ್ರೆ

                                         ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ

ಕಮಲದ್ ಹೂವಿನ್ ಕುರ್ಚಿ ಮೇಲೆ ಜೊಕಾಗ್ ಕುಂತ್ಕೊ ನೀನು
ನಾಕು ಮೂತಿಗ್ ನಾಕು ಬುಂಡೆ ಎಂಡ ತರ್ತೀನ್ ನಾನು
ಸರ್ಸೊತಮ್ಮಂಗೇಳಾಕಿಲ್ಲಾ ನೀನೇನ್ ಹೆದರ್ಕೊಬೇಡಾ
ಕೇಳಿದ್ ವರಾನ್ ವಂದಿಸ್ ಕೊಟ್ರೆ ತಕ್ಕೊ ಎಂಡದ್ ಫೇಡಾ

ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ
ಭೂಮಿಯುದ್ದಕ್ ಬೊಗ್ಗಿಸ್ತೀನಿ ಎಂಡ ತುಂಬ್ಕೊಂಡ್ ಮೈನಾ

Read Full Post »

ವಿಮಲ ಸೆಂಟು(?) ಬೆದರಿಮೆ ಬೆದರಿಮೆ
ಆದಿ ಕಮಲ ಜುಳ ಜುಳ
ನಿಮಗೆ ಯಾರು ಬೇಕಮ್ಮ ಬೇಕಮ್ಮ
ನಮಗೆ ಲಕ್ಷ್ಮಿ ಬೇಕಮ್ಮ ಬೇಕಮ್ಮ

ಈ ಹಾಡನ್ನು ಹಾಡುತ್ತ, ಎರಡು ಪಂಗಡಗಳು ತಮಗೆ ಬೇಕಾದವರನ್ನು ಆರಿಸುಕೊಳ್ಳುತ್ತಾರೆ. ಉದಾಹರಣೆಗೆ, ಅ ಮತ್ತು ಇ ಪಂಗಡಗಳಿವೆ ಎಂದುಕೊಳ್ಳೋಣ. ಪ್ರತಿ ಪಂಗಡದ ಎಲ್ಲರು ಒಬ್ಬರ ಕೈ ಇನ್ನೊಬ್ಬರು ಹಿಡಿದು ಒಂದು ಸರಪಳಿ ಯಂತೆ ನಿಲ್ಲಬೇಕು. ಹಾಡು ಶುರುವಾಗುವ ಮುನ್ನ ಎರಡು ಪಂಗಡ ಸರಪಳಿಗಳು ಎದುರುಬದುರಾಗಿ ನಿಲ್ಲಬೇಕು. ಮೊದಲಿಗೆ ಅ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ವಿಮಲ ಸೆಂಟು ಬೆದರಿಮೆ ಬೆದರಿಮೆ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಇ ಪಂಗಡ ಹಿಮ್ಮುಕವಾಗಿ ನಡೆಯಬೇಕು. ನಂತರ ಇ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ಆದಿ ಕಮಲ ಜುಳ ಜುಳ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಅ ಪಂಗಡ ಹಿಮ್ಮುಕವಾಗಿ ನಡೆಯಬೇಕು. ಇದಾದ ಮೇಲೆ ಅ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ನಿಮಗೆ ಯಾರು ಬೇಕಮ್ಮ ಬೇಕಮ್ಮ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಇ ಪಂಗಡ ಹಿಮ್ಮುಕವಾಗಿ ನಡೆಯಬೇಕು. ಕೊನೆಗೆ ಇ ಪಂಗಡ ಮುಂದೆ ಹೆಜ್ಜೆ ಇಡುತ್ತ ‘ನಮಗೆ ಲಕ್ಷ್ಮಿ ಬೇಕಮ್ಮ ಬೇಕಮ್ಮ’ ಎಂದು ಹೇಳುತ್ತಾ ನಡೆಯಬೇಕು, ಇದಕ್ಕೆ ಅನುಗುಣವಾಗಿ ಅ ಪಂಗಡ ಹಿಮ್ಮುಕವಾಗಿ ನಡೆಯಬೇಕು. ಆಗ ಅ ಪಂಗಡದ ‘ಲಕ್ಷ್ಮಿ’ ಹುಡುಗಿ ಇ ಪಂಗಡ ಸೇರುತ್ತಾಳೆ. ಹೇಗೆ ಮುಂದುವರೆದು ಎರಡು ಪಂಗಡಗಳು ತಮಗೆ ಬೇಕಾದವರನ್ನು ಆರಿಸಿಕೊಂಡು ಕೊನೆಗೆ ಎರಡು ತಂಡಗಳು ಮುಂದಿನ ಆಟ ಆಡಲು ತಯಾರಾಗಬಹುದು.

ನಿಮಗೆ ತಿಳಿದಂತೆ ಮೇಲಿನ ಪದ್ಯದಲ್ಲಿ ತಪ್ಪಿದ್ದರೆ, ಅಥವಾ ಬೇರೆ ಪದಗಳಿದ್ದಲ್ಲಿ ದಯವಿಟ್ಟು ತಿಳಿಸಿ.

Read Full Post »

ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

Read Full Post »