ಶಾಂತಕ್ಕ ಶಾಂತಕ್ಕ ಚೆನ್ನಾಗಿದ್ದೀಯಾ?
ಮಂಚದ ಮ್ಯಾಲೆ ಮಲಗಿದ್ದೀಯಾ?
ಅಪ್ಪಾ ಬಂದರೆ ಅಳುತಿದ್ದೀಯಾ?
ಗಂಡಾ ಬಂದರೆ ನಗುತಿದ್ದೀಯಾ!
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಬಾಲ ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಶಾಂತಕ್ಕ ಶಾಂತಕ್ಕ ಚೆನ್ನಾಗಿದ್ದೀಯಾ?
ಮಂಚದ ಮ್ಯಾಲೆ ಮಲಗಿದ್ದೀಯಾ?
ಅಪ್ಪಾ ಬಂದರೆ ಅಳುತಿದ್ದೀಯಾ?
ಗಂಡಾ ಬಂದರೆ ನಗುತಿದ್ದೀಯಾ!
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಬಾಲ ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಆಚೆ ಮರಕ್ಕೂಂದ್ ಒಬ್ಬಿಟ್ಟು
ಈಚೆ ಮರಕ್ಕೂಂದ್ ಒಬ್ಬಿಟ್ಟು
ಹೊಂಗೆ ಮರಕ್ಕೆ ತಾಳಿ ಕಟ್ಟಿ ತಿಂಗಳಾಯ್ತು
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಕಪ್ಪೆ ಕಲಕಲ, ತುಪ್ಪ ಜಲಿಜಲಿ
ಮಾವಿನ ವಾಟೆ, ಮರದಲಿ ಪೋಟೆ
ಹದ್ದಿನ ಕೈಲಿ ಸುದ್ದಿ ಕಳಿಸಿ
ಕಾಗೆ ಕೈಲಿ ಕಂಕಣ ಕಟ್ಟಿಸಿ
ಸಣ್ಣಿ ಮದುವೆ ಶನಿವಾರ
ಊಟಕ್ಕ್ ಬನ್ನಿ ಬುದುವಾರ
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಕೈ ಕೈ ಎಲ್ಲೋಯ್ತು?
ಕದದ ಮೂಲೆಗೋಯ್ತು!
ಕದ ಏನ್ ಕೊಡ್ತು?
ಚಕ್ಕೆ ಕೊಡ್ತು!
ಚಕ್ಕೆ ಏನ್ ಮಾಡ್ದೆ?
ಒಲೆಗ್ ಹಾಕ್ದೆ
ಒಲೆ ಏನ್ ಕೊಡ್ತು?
ಬೂದಿ ಕೊಡ್ತು!
ಬೂದಿ ಏನ್ ಮಾಡ್ದೆ?
ತಿಪ್ಪೆಗ್ ಹಾಕ್ದೆ!
ತಿಪ್ಪೆ ಏನ್ ಕೊಡ್ತು?
ಗೊಬ್ಬರ ಕೊಡ್ತು!
ಗೊಬ್ಬರ ಏನ್ ಮಾಡ್ದೆ?
ಗದ್ದೆಗ್ ಹಾಕ್ದೆ!
ಗದ್ದೆ ಏನ್ ಕೊಡ್ತು?
ಗರಿಕೆ ಕೊಡ್ತು!
ಗರಿಕೆ ಏನ್ ಮಾಡ್ದೆ?
ಹಸುಗ್ ಹಾಕ್ದೆ!
ಹಸು ಏನ್ ಕೊಡ್ತು?
ಹಾಲು ಕೊಡ್ತು!
ಹಾಲೇನ್ ಮಾಡ್ದೆ?
ನಾನ್ ಒಸಿ ಕುಡ್ದು, ನಿನ್ಗ್ ಒಸಿ ಮಡಗಿದ್ದೆ
ಕೊತ್ತಿ ಕುಡ್ಕೊಂಡ್ ಹೊಂಟೋಯ್ತು
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಮಕ್ಕಳ ಆಟಗಳು on ಸೆಪ್ಟೆಂಬರ್ 21, 2013| 1 Comment »
ಕಣ್ಣ ಮುಚ್ಚೆ ಕಾಡಿಗೋಡೆ
ಉದ್ದಿನ ಮೂಟೆ ಉರುಳೆ ಹೋಯಿತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ
ಈ ಆಟದಲ್ಲಿ, ಅಜ್ಜಿ (ಎಂದರೆ ದೊಡ್ಡವರು) ಒಂದು ಕಡೆ ಕುಳಿತಿರುತ್ತಾರೆ, ಮಕ್ಕಳೆಲ್ಲಾ ಸಾಲಾಗಿ ಅಜ್ಜಿ ಎದುರು ನಿಂತು ಕೊಳ್ಳಬೇಕು. ಅಜ್ಜಿ ತನ್ನ ಒಂದು ಕೈಯಿಂದ ಮಗುವಿನ ಕಣ್ಣು ಮುಚ್ಚಿ, ಮಾತೊಂದು ಕೈಯಲ್ಲಿ ಮಗುವಿನ ಮಗುವಿನ ತೋರು ಬೆರಳನ್ನು ಹಿಡಿದು, “ಅವರ ಬಿಟ್ಟು ಅವರ ಬಿಟ್ಟು ಇವರ್ಯಾರು” ಎಂದು ಕೇಳುತ್ತಾರೆ. ಆಗ ಕಣ್ಣು ಮುಚ್ಚಿಸಿಕೊಂಡಿರುವ ಮಗು, ಅಜ್ಜಿ ತೋರಿಸಿದ ಮಗುವಿನ ಹೆಸರನ್ನು ಹೇಳಬೇಕು, ಸರಿಯಾಗಿ ಹೇಳಿದರೆ, ಅ ಮಗು ಅಜ್ಜಿಯ ಮಡಿಲಿಗೆ ಬಂದು ಕಣ್ಣು ಮುಚ್ಚಿಸಿಕೊಳ್ಳಬೇಕು. ಅಜ್ಜಿ ತೋರಿಸಿದ ಮಗುವಿನ ಹೆಸರನ್ನು ಸರಿಯಾಗಿ ಹೇಳದಿದ್ದರೆ, ಅಜ್ಜಿ ಆ ಮಗುವಿಗೆ “ಹಕ್ಕಿ ಕಾಡಿಗೆ ಹೋಗಿ ಅವಿತುಕೋ” ಎಂದು ಹೇಳುತ್ತಾರೆ. ಆ ಮಗು ಯಾರ ಕಣ್ಣಿಗೂ ಕಾಣದ ಕಡೆ ಅವಿತುಕೊಳ್ಳ ಬೇಕು. ಹೀಗೆ ಎಲ್ಲರ ಸರದಿ ಮುಗಿದ ನಂತರ, ಅಜ್ಜಿ ಕಣ್ಣು ಮುಚ್ಚಿದ ಮಗುವಿನ ಕಣ್ಣು ತೆರೆದು, ಹಕ್ಕಿಗಳನ್ನು ಕಂಡು ಹಿಡಿ ಎಂದು ಹೇಳುತ್ತಾರೆ. ಮಗು ಯಾರನ್ನಾದರೂ ಒಬ್ಬರನ್ನು ಕಂಡು ಹಿಡಿದರೆ, ಹಿಡಿದವ ಕಳ್ಳ/ಕಳ್ಳಿ ಯಾಗಿ ಕಣ್ಣು ಮುಚ್ಚಿಸಿಕೊಳ್ಳಬೇಕಾಗುತ್ತದೆ. ಮಗು ಕಂಡು ಹಿಡಿಯುವ ಮುನ್ನವೇ ಎಲ್ಲರೂ ಅಜ್ಜಿಯನ್ನು ಮುಟ್ಟಿದರೆ, ಆಗ ಮಗು ಮತ್ತೆ ಕಣ್ಣೂ ಮುಚ್ಚಿಸಿಕೊಳ್ಳಬೇಕಾಗುತ್ತದೆ.
ಈ ಆಟವನ್ನು ನೀವು ಬೇರೆ ರೀತಿ ಆಡುತಿದ್ದರೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Posted in ಮಕ್ಕಳ ಆಟಗಳು on ಸೆಪ್ಟೆಂಬರ್ 21, 2013| Leave a Comment »
ಒಬ್ಬಾರ ತಲೆ ಮೇಲೆ
ಗುಬ್ಬಚ್ಚಿ ಕೂತುಕೊಂಡು
ಒಬ್ಬಟ್ಟು ಮಾಡುತೈತೆ
ಆಟ: ಇನ್ನೊಬ್ಬರ ತಲೆ ಮೇಲೆ ಬಿಳಿ ಪುಕ್ಕ ಅಥವಾ ಹಗುರವಾದ ವಸ್ತುವನ್ನು ಇಟ್ಟು, ಮೇಲಿನ ಹಾಡನ್ನು ಅಣಕಿಸಿಕೊಂಡು ಹೇಳಬೇಕು
ಈ ಆಟದ ಬಗ್ಗೆ ನಿಮಗೆ ಹೆಚ್ಚಿಗೆ ತಿಳಿದಿದ್ದರೆ, ನಮ್ಮೊಂದಿಗೆ ಹಂಚಿಕೊಳ್ಳಿ.