Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘ಶಿವರಾಮ ಕಾರಂತ’

ಪರಿಚಯ:
ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಜನನ ಬಾಲ್ಯ:
ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿಯನ್ನು ಪಡೆದ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ೧೯೦೨ರ ಅಕ್ಟೋಬರ್ ೧೦ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶೇಷ ಕಾರಂತರು ,ತಾಯಿ ಲಕ್ಶ್ಮೀ ಕಾರಂತರು. ೯ ಮಕ್ಕಳ ಕುಟುಂಬದಲ್ಲಿ ಶಿವರಾಮ ಕಾರಂತರು ೪ನೇಯ ಮಗ. ಶಿವರಾಮ ಕಾರಂತರ ಅಣ್ಣ ಮದರಾಸ ಸರಕಾರದಲ್ಲಿ ಸಚಿವರಾಗಿದ್ದರು. ಇನ್ನೊಬ್ಬ ಅಣ್ಣ ವಾಸುದೇವ ಕಾರಂತರು ಲೇಖಕರೂ ,ಆದ್ಯಾತ್ಮ ವಿಷಯಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದಾರೆ.
ಶೇಷ ಕಾರಂತರು ಶಾಲಾ ಶಿಕ್ಷಕರಾಗಿದ್ದು ದೊಡ್ದ ಕುಟುಂಬವನ್ನು ಸಾಕಲು ಅಸಾಧ್ಯವಾದಾಗ ಕೆಲಸ ಬಿಟ್ಟು ಜವಳಿ ಅಂಗಡಿ ಆರಂಭಿಸಿದರು.ಇಂಗ್ಲೀಷರನ್ನು ಕಂಡರೆ ಅಸಹ್ಯಪಡುತಿದ್ದ ಕಾಲದಲ್ಲಿ ಶೇಷರು ಅವರ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸಿದರು. ಕುಂದಾಪುರದ ಶಾಲೆಯಲ್ಲಿ ೧೯೨೦ ರಲ್ಲಿ ಶಿವರಾಮ ಕಾರಂತರು ತಮ್ಮ ಎಸ್.ಎಸ್.ಎಲ್.ಸಿ ಪರೀಕ್ಶೆಯನ್ನು ಬರೆದು ಮುಗಿಸಿದರು. ತಮ್ಮ ಶಾಲೆಯಲ್ಲಿ ರಂಗರಾಯರು ಕಾರಂತರ ಮೊದಲ ಗುರುಗಳಾಗಿ ಕಾರಂತರಿಗೆ ಬೆಂಬಲ ನೀಡಿದರು. ಮುದ್ದಣ ಕವಿಯ ಗುರುವಾಗಿದ್ದ ಮಳಲಿ ಸುಬ್ಬರಾಯರು ಸಹ ಶಿವರಾಮ ಕಾರಂತರಿಗೆ ಗುರುವಾಗಿದ್ದರು. ಮಳಲಿ ಸುಬ್ಬರಾಯರು ಮೂಲತ: ಯಕ್ಷಗಾನ ರಚನೆ ಮಾಡಬಲ್ಲವರಾಗಿದ್ದು ಯಕ್ಷಗಾನದ ಬಗ್ಗೆ ಶಿವರಾಮರಿಗೆ ಆಸಕ್ತಿ ಮೂಡಲು ಮುಖ್ಯ ಕಾರಣರಾದರು.
ಶಿವರಾಮ ಕಾರಂತರಿಗೆ ಪರಿಸರವೆಂದರೆ ಬಹಳಾ ಪ್ರೀತಿ. ಅವರು ಬಾಲ್ಯದಲ್ಲಿ ಕೆರೆಗಳನ್ನು ಏರಿ,ಸಮುದ್ರತೀರ,ಮರದ ನೆರಳಿನ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು. ಆಧುನಿಕ ವಿದ್ಯಾಭ್ಯಾಸ ಕೇವಲ ಹೊಟ್ಟೆಪಾಡಿಗಾಗಿ ಎನ್ನುವುದು ಅವರ ಅಭಿಪ್ರಾಯ. ನಿಜವಾದ ವ್ಯಕ್ತಿತ್ವದ ವಿಕಸನವಾದರೆ ಅದೇ ನಿಜವಾದ ಶಿಕ್ಷಣವೆನ್ನುವುದು ಅವರ ಅಭಿಪ್ರಾಯವಾಗಿತ್ತು. ೧೯೨೦ರಲ್ಲಿ ಗಾಂಧೀಜಿಯವರು ಸ್ವತಂತ್ರ ಹೋರಾಟದಲ್ಲಿ ಶಾಲಾ ಮಕ್ಕಳು ಬಾಗವಹಿಸಬೇಕೆಂದು ಕರೆಕೊಟ್ಟಾಗ ಕಾರಂತರೂ ಚಳವಳಿಯಲ್ಲಿ ಭಾಗವಹಿಸಿದ್ದರು.
ವಿದ್ಯಾಭ್ಯಾಸ:
ಕುಂದಾಪುರದ ಶಾಲೆಯಲ್ಲಿ ೧೯೨೦ ರಲ್ಲಿ ಶಿವರಾಮ ಕಾರಂತರು ತಮ್ಮ ಎಸ್.ಎಸ್.ಎಲ್.ಸಿ ಪರೀಕ್ಶೆಯನ್ನು ಬರೆದು ಮುಗಿಸಿದರು.
ಕನ್ನಡ ಸಾಹಿತ್ಯಕ್ಕೆ ಶಿವರಾಮ ಕಾರಂತ ಅವರ ಕೊಡುಗೆಗಳು:
ಕೃತಿಗಳು:
ಕವನ ಸಂಕಲನಗಳು
ರಾಷ್ಟ್ರಗೀತ ಸುಧಾಕರ
ಸೀಳ್ಗವನಗಳು
ಕಾದಂಬರಿಗಳು
ಅದೇ ಊರು, ಅದೆ ಮರ
ಅಳಿದ ಮೇಲೆ
ಅಂಟಿದ ಅಪರಂಜಿ
ಆಳ, ನಿರಾಳ
ಇದ್ದರೂ ಚಿಂತೆ
ಇನ್ನೊಂದೇ ದಾರಿ
ಇಳೆಯೆಂಬ
ಉಕ್ಕಿದ ನೊರೆ
ಒಡಹುಟ್ಟಿದವರು
ಒಂಟಿ ದನಿ
ಔದಾರ್ಯದ ಉರುಳಲ್ಲಿ
ಕಣ್ಣಿದ್ದೂ ಕಾಣರು
ಕನ್ನಡಿಯಲ್ಲಿ ಕಂಡಾತ
ಕನ್ಯಾಬಲಿ
ಕರುಳಿನ ಕರೆ
ಕೇವಲ ಮನುಷ್ಯರು
ಗೆದ್ದ ದೊಡ್ಡಸ್ತಿಕೆ
ಗೊಂಡಾರಣ್ಯ
ಜಗದೋದ್ಧಾರ ನಾ
ಜಾರುವ ದಾರಿಯಲ್ಲಿ
ದೇವದೂತರು
ಧರ್ಮರಾಯನ ಸಂಸಾರ
ನಷ್ಟ ದಿಗ್ಗಜಗಳು
ನಂಬಿದವರ ನಾಕ, ನರಕ
ನಾವು ಕಟ್ಟಿದ ಸ್ವರ್ಗ
ನಿರ್ಭಾಗ್ಯ ಜನ್ಮ
ಬತ್ತದ ತೊರೆ
ಭೂತ
ಮರಳಿ ಮಣ್ಣಿಗೆ
ಮುಗಿದ ಯುದ್ಧ
ಮೂಜನ್ಮ
ಮೈ ಮನಗಳ ಸುಳಿಯಲ್ಲಿ
ಮೊಗ ಪಡೆದ ಮನ
ವಿಚಿತ್ರ ಕೂಟ
ಶನೀಶ್ವರನ ನೆರಳಿನಲ್ಲಿ
ಸನ್ಯಾಸಿಯ ಬದುಕು
ಸಮೀಕ್ಷೆ
ಸರಸಮ್ಮನ ಸಮಾಧಿ
ಸ್ವಪ್ನದ ಹೊಳೆ
ಹೆತ್ತಳಾ ತಾಯಿ
ಚಲನಚಿತ್ರವಾಗಿರುವ ಕಾದಂಬರಿಗಳು
ಕುಡಿಯರ ಕೂಸು (ಚಲನಚಿತ್ರವಾಗಿದೆ)
ಚಿಗುರಿದ ಕನಸು(ಚಲನಚಿತ್ರವಾಗಿದೆ)
ಚೋಮನ ದುಡಿ(ಚಲನಚಿತ್ರವಾಗಿದೆ)
ಬೆಟ್ಟದ ಜೀವ(ಚಲನಚಿತ್ರವಾಗಿದೆ)
ಮೂಕಜ್ಜಿಯ ಕನಸುಗಳುಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ನಾಟಕ
ಅವಳಿ ನಾಟಕಗಳು
ಏಕಾಂಕ ನಾಟಕಗಳು
ಐದು ನಾಟಕಗಳು
ಕಟ್ಟೆ ಪುರಾಣ
ಕಠಾರಿ ಭೈರವ
ಕರ್ಣಾರ್ಜುನ
ಕೀಚಕ ಸೈರಂಧ್ರಿ
ಗರ್ಭಗುಡಿ
ಗೀತ ನಾಟಕಗಳು
ಜಂಬದ ಜಾನಕಿ
ಜ್ಯೂಲಿಯಸ್ ಸೀಸರ್
ಡುಮಿಂಗೊ
ದೃಷ್ಟಿ ಸಂಗಮ
ನವೀನ ನಾಟಕಗಳು
ನಾರದ ಗರ್ವಭಂಗ
ಬಿತ್ತಿದ ಬೆಳೆ
ಬೆವರಿಗೆ ಜಯವಾಗಲಿ
ಬೌದ್ಧ ಯಾತ್ರಾ
ಮಂಗಳಾರತಿ
ಮುಕ್ತದ್ವಾರ
ಯಾರೊ ಅಂದರು
ವಿಜಯ
ವಿಜಯ ದಶಮಿ
ಸರಳ ವಿರಳ ನಾಟಕಗಳು
ಸಾವಿರ ಮಿಲಿಯ
ಹಣೆ ಬರಹ
ಹಿರಿಯಕ್ಕನ ಚಾಳಿ
ಹೇಗಾದರೇನು?
ಹೇಮಂತ
ಸಣ್ಣ ಕತೆ
ಕವಿಕರ್ಮ
ತೆರೆಯ ಮರೆಯಲ್ಲಿ
ಹಸಿವು
ಹಾವು
ಹರಟೆ/ವಿಡಂಬನೆ
ಗ್ನಾನ
ಚಿಕ್ಕ ದೊಡ್ಡವರು
ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
ಮೈಗಳ್ಳನ ದಿನಚರಿಯಿಂದ
ಮೈಲಿಕಲ್ಲಿನೊಡನೆ ಮಾತುಕತೆಗಳು
ಹಳ್ಳಿಯ ಹತ್ತು ಸಮಸ್ತರು
ಪ್ರವಾಸ ಕಥನ
ಅಪೂರ್ವ ಪಶ್ಚಿಮ
ಅರಸಿಕರಲ್ಲ
ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಪೂರ್ವದಿಂದ ಅತ್ಯಪೂರ್ವಕ್ಕೆ
ಯಕ್ಷರಂಗಕ್ಕಾಗಿ ಪ್ರವಾಸ
ಆತ್ಮಕಥನ
ಸ್ಮೃತಿಪಟಲದಿಂದ (೧,೨,೩)
ಹುಚ್ಚು ಮನಸ್ಸಿನ ಹತ್ತು ಮುಖಗಳು
ಜೀವನ ಚರಿತ್ರೆ
ಕಲಾವಿದ ಕೃಷ್ಣ ಹೆಬ್ಬಾರರು
ಕಲಾಪ್ರಬಂಧ
ಕಲೆಯ ದರ್ಶನ
ಕರ್ನಾಟಕದಲ್ಲಿ ಚಿತ್ರಕಲೆ
ಚಾಲುಕ್ಯ ವಾಸ್ತು ಮತ್ತು ಶಿಲ್ಪ
ಚಿತ್ರಶಿಲ್ಪ, ವಾಸ್ತುಕಲೆಗಳು
ಜಾನಪದ ಗೀತೆಗಳು
ಭಾರತೀಯ ಚಿತ್ರಕಲೆ
ಭಾರತೀಯ ಶಿಲ್ಪ
ಯಕ್ಷಗಾನ ಬಯಲಾಟ
ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು
ವೈಜ್ಞಾನಿಕ
ಅದ್ಭುತ ಜಗತ್ತು (೧. ವಿಚಿತ್ರ ಖಗೋಲ, ೨. ನಮ್ಮ ಭೂಖಂಡಗಳು)
ಉಷ್ಣವಲಯದ ಆಗ್ನೇಸ್ಯ
ಪ್ರಾಣಿ ಪ್ರಪಂಚದ ವಿಸ್ಮಯಗಳು
ಮಂಗನ ಕಾಯಿಲೆ
ವಿಜ್ಞಾನ ಮತ್ತು ಅಂಧಶೃದ್ಧೆ
ವಿಶಾಲ ಸಾಗರಗಳು
ಹಿರಿಯ ಕಿರಿಯ ಹಕ್ಕಿಗಳು
ವಿಶ್ವಕೋಶ
ಕಲಾ ಪ್ರಪಂಚ
ಪ್ರಾಣಿ ಪ್ರಪಂಚ
ಬಾಲ ಪ್ರಪಂಚ (೧,೨,೩)
ವಿಜ್ಞಾನ ಪ್ರಪಂಚ (೧,೨,೩,೪)
ನಿಘಂಟು
ಸಿರಿಗನ್ನಡ ಅರ್ಥಕೋಶ
ಅನುವಾದ
ಕೀಟನಾಶಕಗಳ ಪಿಡುಗುಗಳು
ಕೋಟ ಮಹಾಜಗತ್ತು
ಜನತೆಯೂ ಅರಣ್ಯಗಳೂ
ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
ನಮ್ಮ ಸುತ್ತಲಿನ ಕಡಲು
ನಮ್ಮೆಲ್ಲರಿಗೂ ಒಂದೇ ಭವಿಷ್ಯ
ಪರಮಾಣು – ಇಂದು ನಾಳೆ
ಪಂಚ ಋತು
ಬೆಳೆಯುತ್ತಿರುವ ಸಮಸ್ಯೆ
ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
ಭಾರತ ವರ್ಷದಲ್ಲಿ ಬ್ರಿಟಿಷರು
ಯಾರು ಲಕ್ಷಿಸುವರು?
ಶ್ರೀ ರಾಮಕೃಷ್ಣರ ಜೀವನ ಚರಿತೆ
ಮಕ್ಕಳ ಪುಸ್ತಕಗಳು
ಅನಾದಿ ಕಾಲದ ಮನುಷ್ಯ
ಒಂದೇ ರಾತ್ರಿ ಒಂದೇ ಹಗಲು
ಗಜರಾಜ
ಗೆದ್ದವರ ಸತ್ಯ
ಢಂ ಢಂ ಢೋಲು
ನರನೋ ವಾನರನೋ
ಮರಿಯಪ್ಪನ ಸಾಹಸಗಳು
ಮಂಗನ ಮದುವೆ
ಸೂರ್ಯ ಚಂದ್ರ
ಹುಲಿರಾಯ
ಪ್ರಶಸ್ತಿ- ಪುರಸ್ಕಾರ:
⦁ ಜ್ಞಾನಪೀಠ ಪ್ರಶಸ್ತಿ
⦁ ಪದ್ಮಭೂಷಣ ಪ್ರಶಸ್ತಿ
⦁ ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್
⦁ ರಾವ್ ಬಹದೂರ್ ಪ್ರಶಸ್ತಿ (೧೯೩೦ ರಲ್ಲಿ)
⦁ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
⦁ ಪಂಪ ಪ್ರಶಸ್ತಿ

Read Full Post »