Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘ತ. ರಾ. ಸುಬ್ಬರಾವ್ ; ತರಾಸು’

ಲೇಖಕರ ಪರಿಚಯ

ತರಾಸು ಎಂದೆ ಜನಪ್ರೀಯವಾಗಿರುವ ತಳುಕಿನ ರಾಮಸ್ವಾಮಿ ಸುಬ್ಬರಾವ್ (೧೯೨೦ – ೧೯೮೪), ಅವರು ಕನ್ನಡದ ಸುಪ್ರಸಿದ್ದ ಕಾದಂಬರಿಕಾರರು ಹಾಗು ಕನ್ನಡದ ನವ್ಯ ಚಳುವಳಿಯ ಹರಿಕಾರರೂ ಆಗಿದ್ದರು. ಇವರ ದುರ್ಗಾಸ್ತಮಾನ ಕಾದಂಬರಿಗೆ ಮರಣಾನಂತರ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ದೊರಕಿತು.

 ಜನನ ಮತ್ತು ಬಾಲ್ಯ

ಕರ್ನಾಟಕದ ಮಾಲೆಬೆನ್ನೂರಿನಲ್ಲಿ ತರಾಸು ಅವರು ೨೧ನೆ ಎಪ್ರಿಲ್ ೧೯೨೦ ರಲ್ಲಿ ಜನಿಸಿದರು. ತರಾಸು ಅವರ ತಂದೆ ರಾಮಸ್ವಾಮಿ ಅವರು ಹರಿಹರದಲ್ಲಿ ಲಾಯರ್ ಆಗಿದ್ದರು. ತರಾಸು ಅವರ ತಾಯಿ ಸೀತಮ್ಮ. ತರಾಸು ಅವರ  ತಾತಸುಬ್ಬಣ್ಣನವರು ೮ ವರ್ಷದವರಾಗಿದ್ದಾಗ ಆಂಧ್ರ ಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ಕನ್ನಡದ ಸುಪ್ರಸಿದ್ದ ಹಾಗು ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯ, ತರಾಸು ಅವರ ಚಿಕ್ಕಪ್ಪ. ತರಾಸು ಅವರು “ಪುಟ್ಟನ ಚೆಂಡು” ಎಂಬ ಕೃತಿಯನ್ನು. ತನ್ನ ಚಿಕ್ಕಪ್ಪನೋಡನೆ ಮಾಡಿಕೊಂಡ ಪಂದ್ಯಕ್ಕೋಸ್ಕರ ಬರೆದಿದ್ದು. ತರಾಸು ಅವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ, ಚಿತ್ರದುರ್ಗದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದೇಶಭಕ್ತಿ ಗೀತೆಯನ್ನು ಹಾಡುವುದು ಹಾಗು ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡುತ್ತಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಕಾಣಿಕೆಯನ್ನು ನೀಡಿರುತ್ತಾರೆ. ಬಾಗೂರು ಎಂಬ ಹಳ್ಳಿಯಲ್ಲಿ ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡುತ್ತಿರುವಾಗ ಅವರನ್ನು ಬಂದಿಸಿ, ಜೈಲಿಗೆ ಹಾಕುತ್ತಾರೆ. ಇದರಿಂದ ತರಾಸು ಅವರ ತಂದೆ ರಾಮಸ್ವಾಮಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಮಗನನ್ನು ಕಂಡು,  ಎಲ್ಲಿ ಆತನ ವಿಧ್ಯಾಭ್ಯಾಸ ಹಾಳಾಗುವುದೋ ಎಂದು, ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಸೇರಿಸುತ್ತಾರೆ. ಅಲ್ಲಿಂದ ನಂತರ ಶಿವಮೊಗ್ಗ ಹಾಗು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಯುತ್ತದೆ. ಆದರೆ ತರಾಸು ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅದರ ಭಾಗವಾಗಿ ಶಾಲಾ ಪಾಠವನ್ನು ಬಹಿಷ್ಕರಿಸಿದ್ದರು. ಕೊನೆಗೆ ಬ್ರಿಟೀಶರಿಗೆ ’ಭಾರತ ಬಿಟ್ಟು ತೊಲಗಿ’ ಎಂದು ಕರೆಕೊಟ್ಟು ಚಳುವಳಿ ಅರಂಭಿಸಿದ ಗಾಂದಿಯವರ ಕರೆಗೆ ಓಗೊಟ್ಟು, ತಾವು ಚಳುವಳಿಯಲ್ಲಿ ಭಾಗವಹಿಸಿ, ಜೈಲನ್ನು ಸೇರುತ್ತಾರೆ. ತರಾಸು ಅವರು ೧೯೪೨ರ ಡಿಸೆಂಬರ್ ನಲ್ಲಿ  ಜೈಲಿನಿಂದ ಹೊರಬರುತ್ತಾರೆ. ಜೈಲಿನಿಂದ ಹೊರಬಂದ ಮೇಲೆ, ಭಾರತ ಸ್ವತಂತ್ರ್ಯ ವನ್ನು ಪಡೆಯುವ ವರೆಗೆ ತಾವು ಮತ್ತೆ ತರಗತಿಗೆ ಸೇರುವುದಿಲ್ಲ ಎಂದು ಮನಸ್ಸು ಮಾಡುತ್ತಾರೆ. ತರಾಸು ಅವರು ಮೊದಲು ನಾಸ್ತಿಕರಗಿದ್ದು ನಂತರ ಆಸ್ತಿಕರಾಗಿ ಪರಿವರ್ತಿತರಾಗುತ್ತಾರೆ.

 ವಿದ್ಯಾಭ್ಯಾಸ

ತರಾಸು ಅವರು ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು

 ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳು

ತರಾಸು ಅವರು ಕನ್ನಡದಲ್ಲಿ ಕಾದಂಬರಿಕಾರರಾಗಿ ಸುಧೀರ್ಘ ಕಾಲ ತೊಡಗಿಸಿಕೊಂಡವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ತೆರೆಗೆ ಬಂದ ಹಲವಾರು ಕನ್ನಡದ ಚಲನಚಿತ್ರಗಳು ಹೆಸರು ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವು, ಚಂದವಳ್ಳಿಯ ತೋಟ, ಹಂಸಗೀತೆ, ನಾಗರಹಾವು, ಬೆಂಕಿಯ ಬಲೆ,

ಗಾಳಿಮಾತು, ‘ಬಿಡುಗಡೆಯ ಬೇಡಿ‘, ಮಸಣದ ಹೂ ಇತ್ಯಾದಿ. ಇವರಹಂಸಗೀತೆಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ಬಸಂತ್ ಬಹಾರ್ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಸುಪ್ರಸಿದ್ಧ ಹಿಂದಿ ಸಾಹಿತಿ ರಾಜೇಂದ್ರ ಸಿಂಹ್ ಬೇಡಿಯವರ ಸಂಭಾಷಣೆಗಳು, ಶೈಲೇಂದ್ರ ಮತ್ತು ಹಸ್ರತ್ ಜೈಪುರಿಯವರ ಗೀತೆಗಳು, ಶಂಕರ್-ಜೈಕಿಶನ್ ರ ಸಂಗೀತ ಮತ್ತು ರಾಜಾ ನವಾಥೆಯವರ ನಿರ್ದೇಶನವಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಭರತ್ ಭೂಷಣ್, ನಿಮ್ಮಿ, ಓಮ್ ಪ್ರಕಾಶ್, ಕುಂಕುಮ್, ಮನ್ ಮೋಹನ್ ಕೃಷ್ಣ, ಮುಂತಾದವರಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಜಯಪ್ರದವಾಗಿತ್ತು.

 ಕೃತಿಗಳು:

ಇವರ ಪ್ರಮುಖ ಕಾದಂಬರಿಗಳು

·       ನಾಗರಹಾವು

·       ಗಾಳಿಮಾತು

·       ಕಸ್ತೂರಿ ಕಂಕಣ

·       ಕಂಬನಿಯ ಕುಯಿಲು

·       ರಾಜ್ಯದಾಹ

·       ರಕ್ತರಾತ್ರಿ

·       ತಿರುಗುಬಾಣ

·       ಹೊಸ ಹಗಲು

·       ವಿಜಯೋತ್ಸವ

·       ನೃಪತುಂಗ

·       ಸಿಡಿಲ ಮೊಗ್ಗು

·       ಚಂದವಳ್ಳಿಯ ತೋಟ

·       ಎರಡು ಹೆಣ್ಣು ಒಂದು ಗಂಡು

·       ಮಾರ್ಗದರ್ಶಿ

·       ಆಕಸ್ಮಿಕ

·       ಅಪರಾಧಿ

·       ಹಂಸಗೀತೆ

·       ಬಿಡುಗಡೆಯ ಬೇಡಿ

ಪ್ರಶಸ್ತಿ- ಪುರಸ್ಕಾರ:

ಇವರ ದುರ್ಗಾಸ್ತಮಾನ ಕೃತಿಗೆ ೧೯೮೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

 

Read Full Post »