Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘ಚದುರಂಗ’

ಲೇಖಕರ ಪರಿಚಯ:

ಸುಬ್ರಮಣ್ಯ ರಾಜೇ ಅರಸ್ ಅವರ ಕಾವ್ಯನಾಮ ಚದುರಂಗ. ಕನ್ನಡದ ಕಾದಂಬರಿಕಾರರಲ್ಲಿ ಚದುರಂಗ ಅವರು ಪ್ರಮುಖರು. ಇವರ ಎರಡು ಕಾದಂಬರಿಗಳು (ಸರ್ವಮಂಗಳ ಹಾಗು ಉಯ್ಯಾಲೆ) ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳಾಗಿ ತಯಾರಾಗಿವೆ.  

 ಜನನ ಬಾಲ್ಯ:

ಮೈಸೂರು ಅರಸರ ವಂಶಕ್ಕೆ ಸೇರಿದ ಸುಬ್ರಮಣ್ಯ ರಾಜೇ ಅರಸ್ ಅವರು ಹುಣುಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1916 ರಲ್ಲಿ ಜನಿಸಿದರು. ಇವರ ತಂದೆ ಮುದ್ದು ರಾಜ ಅರಸ್ ಅವರು ತಲಕಾಡಿನ ಗಂಗರಾಜರ ವಂಶದವರು. ಇವರ ತಾಯಿ ಮರುದೇವಮ್ಮಣ್ಣಿ ಅವರು ಮಂಗರಸರ ವಂಶಕ್ಕೆ ಸೇರಿದವರು. ಮಂಗರಸರು ಕಲ್ಲಹಳ್ಳಿ ರಾಜರಗಿದ್ದವರು. ಚದುರಂಗರ ವಂಶಸ್ಥರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಚದುರಂಗ ಆಟದ ಪ್ರವೀಣರಾಗಿದ್ದರಂತೆ. ಚದುರಂಗರೂ ಕೂಡ ಚದುರಂಗ ಆಟದಲ್ಲಿ ಪರಿಣತಿಯನ್ನು ಹೊಂದಿದ್ದು, ಅದನ್ನೇ ತಮ್ಮ ಕಾವ್ಯನಾಮವನ್ನಾಗಿ ಇರಿಸಿಕೊಂಡರು.

 ವಿದ್ಯಾಭ್ಯಾಸ:

ಚದುರಂಗರು ಕಲ್ಲಹಳ್ಳಿಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಶುರುಮಾಡಿದರು. ಇವರು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೋತೆಗೆ ತಮ್ಮ ವಿದ್ಯಾಭ್ಯಾಸ ಮಾಡಿದರು.  ಚದುರಂಗರು ಪದವಿ ಮುಗಿದ ನಂತರ ಪುಣೆಗೆ ಹೋಗಿ ಅಲ್ಲಿ ಕಾನೂನು ಪದವಿಗೆ ಸೇರಿ ಕೊಂಡರು. ಆದರೆ ಕಾರಣಾಂತರಗಳಿಂದ ಕಾನೂನು ಪದವಿಯನ್ನು ಮುಗಿಸದೆ, ಮೈಸೂರಿಗೆ ಹಿಂದಿರುಗಿದರು. ಗಾಂಧೀಜಿಯ ಪ್ರಭಾವಕ್ಕೆ ಒಳಗಾದ ಚದುರಂಗರು ತಮ್ಮನ್ನು ತಾವೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡದ್ದಲ್ಲದೆ, ಅಂದಿನಿಂದ ಖಾದಿ ಬಟ್ಟೆಗಳನ್ನು ತೊಡಲು ಆರಂಭಿಸುತ್ತಾರೆ. ಇವರು ತಮ್ಮ ಗುರುಗಳಾದ ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ.ಪಿ.ರಾಜರತ್ನಂ ಅವರುಗಳಿಂದ ಪ್ರಭಾವಿತರಾಗಿ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡರು.

 ಕನ್ನಡ ಸಾಹಿತ್ಯಕ್ಕೆ ಚದುರಂಗ ಅವರ ಕೊಡುಗೆಗಳು:

ಮೊದಲಿಗೆ ಸಣ್ಣ ಕತೆಗಳನ್ನು ಬರಯಲು ಶುರುಮಾಡಿದ ಇವರು ನಂತರ ಕೆಲವು ರೇಡಿಯೋ ನಾಟಕಗಳನ್ನು ಬರೆದು ಪ್ರಸಿದ್ದರಾಗಿದ್ದರು. ಇವರು ಮುಖ್ಯವಾಗಿ ಕಾದಂಬರಿಕಾರರು, ನಾಲ್ಕು ಪ್ರಮುಖ ಕಾದಂಬರಿಗಳನ್ನು ಇವರು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸರ್ವಮಂಗಳ ಹಾಗು ಉಯ್ಯಾಲೆ ಚಲನಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇವರು ಕುವೆಂಪು ಹಾಗು ವೆಂಕಟಲಕ್ಷ್ಮಮ್ಮ ಅವರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ.

 ಕೃತಿಗಳು:

ಕಾದಂಬರಿಗಳು

೧. ಸರ್ವಮಂಗಳ

೨. ಉಯ್ಯಾಲೆ

೩. ವೈಶಾಖ

೪. ಹೆಜ್ಜಾಲ

 ಪ್ರಶಸ್ತಿ- ಪುರಸ್ಕಾರ:

ಚದುರಂಗ ಅವರ ಸರ್ವಮಂಗಳ ಕಾದಂಬರಿಗೆ ೧೯೮೨ ರಲ್ಲಿ ಕೇಂದ್ರಿಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುತ್ತದೆ. ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದೆ. ಇವರು ೬೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Read Full Post »