Feeds:
ಲೇಖನಗಳು
ಟಿಪ್ಪಣಿಗಳು

ಚದುರಂಗ

ಲೇಖಕರ ಪರಿಚಯ:

ಸುಬ್ರಮಣ್ಯ ರಾಜೇ ಅರಸ್ ಅವರ ಕಾವ್ಯನಾಮ ಚದುರಂಗ. ಕನ್ನಡದ ಕಾದಂಬರಿಕಾರರಲ್ಲಿ ಚದುರಂಗ ಅವರು ಪ್ರಮುಖರು. ಇವರ ಎರಡು ಕಾದಂಬರಿಗಳು (ಸರ್ವಮಂಗಳ ಹಾಗು ಉಯ್ಯಾಲೆ) ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳಾಗಿ ತಯಾರಾಗಿವೆ.  

 ಜನನ ಬಾಲ್ಯ:

ಮೈಸೂರು ಅರಸರ ವಂಶಕ್ಕೆ ಸೇರಿದ ಸುಬ್ರಮಣ್ಯ ರಾಜೇ ಅರಸ್ ಅವರು ಹುಣುಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1916 ರಲ್ಲಿ ಜನಿಸಿದರು. ಇವರ ತಂದೆ ಮುದ್ದು ರಾಜ ಅರಸ್ ಅವರು ತಲಕಾಡಿನ ಗಂಗರಾಜರ ವಂಶದವರು. ಇವರ ತಾಯಿ ಮರುದೇವಮ್ಮಣ್ಣಿ ಅವರು ಮಂಗರಸರ ವಂಶಕ್ಕೆ ಸೇರಿದವರು. ಮಂಗರಸರು ಕಲ್ಲಹಳ್ಳಿ ರಾಜರಗಿದ್ದವರು. ಚದುರಂಗರ ವಂಶಸ್ಥರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಚದುರಂಗ ಆಟದ ಪ್ರವೀಣರಾಗಿದ್ದರಂತೆ. ಚದುರಂಗರೂ ಕೂಡ ಚದುರಂಗ ಆಟದಲ್ಲಿ ಪರಿಣತಿಯನ್ನು ಹೊಂದಿದ್ದು, ಅದನ್ನೇ ತಮ್ಮ ಕಾವ್ಯನಾಮವನ್ನಾಗಿ ಇರಿಸಿಕೊಂಡರು.

 ವಿದ್ಯಾಭ್ಯಾಸ:

ಚದುರಂಗರು ಕಲ್ಲಹಳ್ಳಿಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಶುರುಮಾಡಿದರು. ಇವರು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೋತೆಗೆ ತಮ್ಮ ವಿದ್ಯಾಭ್ಯಾಸ ಮಾಡಿದರು.  ಚದುರಂಗರು ಪದವಿ ಮುಗಿದ ನಂತರ ಪುಣೆಗೆ ಹೋಗಿ ಅಲ್ಲಿ ಕಾನೂನು ಪದವಿಗೆ ಸೇರಿ ಕೊಂಡರು. ಆದರೆ ಕಾರಣಾಂತರಗಳಿಂದ ಕಾನೂನು ಪದವಿಯನ್ನು ಮುಗಿಸದೆ, ಮೈಸೂರಿಗೆ ಹಿಂದಿರುಗಿದರು. ಗಾಂಧೀಜಿಯ ಪ್ರಭಾವಕ್ಕೆ ಒಳಗಾದ ಚದುರಂಗರು ತಮ್ಮನ್ನು ತಾವೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡದ್ದಲ್ಲದೆ, ಅಂದಿನಿಂದ ಖಾದಿ ಬಟ್ಟೆಗಳನ್ನು ತೊಡಲು ಆರಂಭಿಸುತ್ತಾರೆ. ಇವರು ತಮ್ಮ ಗುರುಗಳಾದ ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ.ಪಿ.ರಾಜರತ್ನಂ ಅವರುಗಳಿಂದ ಪ್ರಭಾವಿತರಾಗಿ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡರು.

 ಕನ್ನಡ ಸಾಹಿತ್ಯಕ್ಕೆ ಚದುರಂಗ ಅವರ ಕೊಡುಗೆಗಳು:

ಮೊದಲಿಗೆ ಸಣ್ಣ ಕತೆಗಳನ್ನು ಬರಯಲು ಶುರುಮಾಡಿದ ಇವರು ನಂತರ ಕೆಲವು ರೇಡಿಯೋ ನಾಟಕಗಳನ್ನು ಬರೆದು ಪ್ರಸಿದ್ದರಾಗಿದ್ದರು. ಇವರು ಮುಖ್ಯವಾಗಿ ಕಾದಂಬರಿಕಾರರು, ನಾಲ್ಕು ಪ್ರಮುಖ ಕಾದಂಬರಿಗಳನ್ನು ಇವರು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸರ್ವಮಂಗಳ ಹಾಗು ಉಯ್ಯಾಲೆ ಚಲನಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇವರು ಕುವೆಂಪು ಹಾಗು ವೆಂಕಟಲಕ್ಷ್ಮಮ್ಮ ಅವರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ.

 ಕೃತಿಗಳು:

ಕಾದಂಬರಿಗಳು

೧. ಸರ್ವಮಂಗಳ

೨. ಉಯ್ಯಾಲೆ

೩. ವೈಶಾಖ

೪. ಹೆಜ್ಜಾಲ

 ಪ್ರಶಸ್ತಿ- ಪುರಸ್ಕಾರ:

ಚದುರಂಗ ಅವರ ಸರ್ವಮಂಗಳ ಕಾದಂಬರಿಗೆ ೧೯೮೨ ರಲ್ಲಿ ಕೇಂದ್ರಿಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುತ್ತದೆ. ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದೆ. ಇವರು ೬೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ತ. ರಾ. ಸುಬ್ಬರಾವ್

ಲೇಖಕರ ಪರಿಚಯ

ತರಾಸು ಎಂದೆ ಜನಪ್ರೀಯವಾಗಿರುವ ತಳುಕಿನ ರಾಮಸ್ವಾಮಿ ಸುಬ್ಬರಾವ್ (೧೯೨೦ – ೧೯೮೪), ಅವರು ಕನ್ನಡದ ಸುಪ್ರಸಿದ್ದ ಕಾದಂಬರಿಕಾರರು ಹಾಗು ಕನ್ನಡದ ನವ್ಯ ಚಳುವಳಿಯ ಹರಿಕಾರರೂ ಆಗಿದ್ದರು. ಇವರ ದುರ್ಗಾಸ್ತಮಾನ ಕಾದಂಬರಿಗೆ ಮರಣಾನಂತರ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ದೊರಕಿತು.

 ಜನನ ಮತ್ತು ಬಾಲ್ಯ

ಕರ್ನಾಟಕದ ಮಾಲೆಬೆನ್ನೂರಿನಲ್ಲಿ ತರಾಸು ಅವರು ೨೧ನೆ ಎಪ್ರಿಲ್ ೧೯೨೦ ರಲ್ಲಿ ಜನಿಸಿದರು. ತರಾಸು ಅವರ ತಂದೆ ರಾಮಸ್ವಾಮಿ ಅವರು ಹರಿಹರದಲ್ಲಿ ಲಾಯರ್ ಆಗಿದ್ದರು. ತರಾಸು ಅವರ ತಾಯಿ ಸೀತಮ್ಮ. ತರಾಸು ಅವರ  ತಾತಸುಬ್ಬಣ್ಣನವರು ೮ ವರ್ಷದವರಾಗಿದ್ದಾಗ ಆಂಧ್ರ ಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ಕನ್ನಡದ ಸುಪ್ರಸಿದ್ದ ಹಾಗು ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯ, ತರಾಸು ಅವರ ಚಿಕ್ಕಪ್ಪ. ತರಾಸು ಅವರು “ಪುಟ್ಟನ ಚೆಂಡು” ಎಂಬ ಕೃತಿಯನ್ನು. ತನ್ನ ಚಿಕ್ಕಪ್ಪನೋಡನೆ ಮಾಡಿಕೊಂಡ ಪಂದ್ಯಕ್ಕೋಸ್ಕರ ಬರೆದಿದ್ದು. ತರಾಸು ಅವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ, ಚಿತ್ರದುರ್ಗದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದೇಶಭಕ್ತಿ ಗೀತೆಯನ್ನು ಹಾಡುವುದು ಹಾಗು ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡುತ್ತಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಕಾಣಿಕೆಯನ್ನು ನೀಡಿರುತ್ತಾರೆ. ಬಾಗೂರು ಎಂಬ ಹಳ್ಳಿಯಲ್ಲಿ ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡುತ್ತಿರುವಾಗ ಅವರನ್ನು ಬಂದಿಸಿ, ಜೈಲಿಗೆ ಹಾಕುತ್ತಾರೆ. ಇದರಿಂದ ತರಾಸು ಅವರ ತಂದೆ ರಾಮಸ್ವಾಮಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಮಗನನ್ನು ಕಂಡು,  ಎಲ್ಲಿ ಆತನ ವಿಧ್ಯಾಭ್ಯಾಸ ಹಾಳಾಗುವುದೋ ಎಂದು, ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಸೇರಿಸುತ್ತಾರೆ. ಅಲ್ಲಿಂದ ನಂತರ ಶಿವಮೊಗ್ಗ ಹಾಗು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಯುತ್ತದೆ. ಆದರೆ ತರಾಸು ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅದರ ಭಾಗವಾಗಿ ಶಾಲಾ ಪಾಠವನ್ನು ಬಹಿಷ್ಕರಿಸಿದ್ದರು. ಕೊನೆಗೆ ಬ್ರಿಟೀಶರಿಗೆ ’ಭಾರತ ಬಿಟ್ಟು ತೊಲಗಿ’ ಎಂದು ಕರೆಕೊಟ್ಟು ಚಳುವಳಿ ಅರಂಭಿಸಿದ ಗಾಂದಿಯವರ ಕರೆಗೆ ಓಗೊಟ್ಟು, ತಾವು ಚಳುವಳಿಯಲ್ಲಿ ಭಾಗವಹಿಸಿ, ಜೈಲನ್ನು ಸೇರುತ್ತಾರೆ. ತರಾಸು ಅವರು ೧೯೪೨ರ ಡಿಸೆಂಬರ್ ನಲ್ಲಿ  ಜೈಲಿನಿಂದ ಹೊರಬರುತ್ತಾರೆ. ಜೈಲಿನಿಂದ ಹೊರಬಂದ ಮೇಲೆ, ಭಾರತ ಸ್ವತಂತ್ರ್ಯ ವನ್ನು ಪಡೆಯುವ ವರೆಗೆ ತಾವು ಮತ್ತೆ ತರಗತಿಗೆ ಸೇರುವುದಿಲ್ಲ ಎಂದು ಮನಸ್ಸು ಮಾಡುತ್ತಾರೆ. ತರಾಸು ಅವರು ಮೊದಲು ನಾಸ್ತಿಕರಗಿದ್ದು ನಂತರ ಆಸ್ತಿಕರಾಗಿ ಪರಿವರ್ತಿತರಾಗುತ್ತಾರೆ.

 ವಿದ್ಯಾಭ್ಯಾಸ

ತರಾಸು ಅವರು ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು

 ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳು

ತರಾಸು ಅವರು ಕನ್ನಡದಲ್ಲಿ ಕಾದಂಬರಿಕಾರರಾಗಿ ಸುಧೀರ್ಘ ಕಾಲ ತೊಡಗಿಸಿಕೊಂಡವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ತೆರೆಗೆ ಬಂದ ಹಲವಾರು ಕನ್ನಡದ ಚಲನಚಿತ್ರಗಳು ಹೆಸರು ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವು, ಚಂದವಳ್ಳಿಯ ತೋಟ, ಹಂಸಗೀತೆ, ನಾಗರಹಾವು, ಬೆಂಕಿಯ ಬಲೆ,

ಗಾಳಿಮಾತು, ‘ಬಿಡುಗಡೆಯ ಬೇಡಿ‘, ಮಸಣದ ಹೂ ಇತ್ಯಾದಿ. ಇವರಹಂಸಗೀತೆಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ಬಸಂತ್ ಬಹಾರ್ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಸುಪ್ರಸಿದ್ಧ ಹಿಂದಿ ಸಾಹಿತಿ ರಾಜೇಂದ್ರ ಸಿಂಹ್ ಬೇಡಿಯವರ ಸಂಭಾಷಣೆಗಳು, ಶೈಲೇಂದ್ರ ಮತ್ತು ಹಸ್ರತ್ ಜೈಪುರಿಯವರ ಗೀತೆಗಳು, ಶಂಕರ್-ಜೈಕಿಶನ್ ರ ಸಂಗೀತ ಮತ್ತು ರಾಜಾ ನವಾಥೆಯವರ ನಿರ್ದೇಶನವಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಭರತ್ ಭೂಷಣ್, ನಿಮ್ಮಿ, ಓಮ್ ಪ್ರಕಾಶ್, ಕುಂಕುಮ್, ಮನ್ ಮೋಹನ್ ಕೃಷ್ಣ, ಮುಂತಾದವರಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಜಯಪ್ರದವಾಗಿತ್ತು.

 ಕೃತಿಗಳು:

ಇವರ ಪ್ರಮುಖ ಕಾದಂಬರಿಗಳು

·       ನಾಗರಹಾವು

·       ಗಾಳಿಮಾತು

·       ಕಸ್ತೂರಿ ಕಂಕಣ

·       ಕಂಬನಿಯ ಕುಯಿಲು

·       ರಾಜ್ಯದಾಹ

·       ರಕ್ತರಾತ್ರಿ

·       ತಿರುಗುಬಾಣ

·       ಹೊಸ ಹಗಲು

·       ವಿಜಯೋತ್ಸವ

·       ನೃಪತುಂಗ

·       ಸಿಡಿಲ ಮೊಗ್ಗು

·       ಚಂದವಳ್ಳಿಯ ತೋಟ

·       ಎರಡು ಹೆಣ್ಣು ಒಂದು ಗಂಡು

·       ಮಾರ್ಗದರ್ಶಿ

·       ಆಕಸ್ಮಿಕ

·       ಅಪರಾಧಿ

·       ಹಂಸಗೀತೆ

·       ಬಿಡುಗಡೆಯ ಬೇಡಿ

ಪ್ರಶಸ್ತಿ- ಪುರಸ್ಕಾರ:

ಇವರ ದುರ್ಗಾಸ್ತಮಾನ ಕೃತಿಗೆ ೧೯೮೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

 

ಚಂದ್ರಶೇಖರ ಕಂಬಾರ

ಪರಿಚಯ:
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.
ಜನನ ಬಾಲ್ಯ:
ಡಾ. ಚಂದ್ರಶೇಖರ ಕಂಬಾರ (ಜನನ – ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು.
ವಿದ್ಯಾಭ್ಯಾಸ:
ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ,೧೯೬೨ರಲ್ಲಿ ‘ಕರ್ನಾಟಕ ವಿವಿ’ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಚಂದ್ರಶೇಖರ ಕಂಬಾರ ಅವರ ಕೊಡುಗೆಗಳು:
ಕೃತಿಗಳು:
ಕಾವ್ಯಗಳು
ಮುಗುಳು ೧೯೫೮
ಹೇಳತೇನ ಕೇಳ ೧೯೬೪
ತಕರಾರಿನವರು ೧೯೭೧ (ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ)
ಸಾವಿರಾರು ನೆರಳು ೧೯೭೯ (ಕುಮಾರ ಆಶನ್ ಪ್ರಶಸ್ತಿ ೧೯೮೨ (ಕೇರಳ ಸರಕಾರ)
ಆಯ್ದ ಕವನಗಳು ೧೯೮೯
ಬೆಳ್ಳಿ ಮೀನು ೧೯೮೯
ಅಕ್ಕಕ್ಕು ಹಾಡುಗಳೆ ೧೯೯೩
ಈ ವರೆಗಿನ ಹೇಳತೇನ ಕೇಳ ೧೯೯೩
ಹಂಪಿಯ ಕಲ್ಲುಗಳು  ೨೦೦೪
ಎಲ್ಲಿದೆ ಶಿವಪುರಂ ೨೦೦೯
ನಾಟಕಗಳು
ಬೆಂಬತ್ತಿದ ಕಣ್ಣು ೧೯೬೧
ನಾರ್ಸಿಸ್ಸ್ ೧೯೬೯
ಋಷ್ಯಶೃಂಗ ೧೯೭೦ (ಸಿನಿಮಾ ಆಗಿದೆ)
ಜೋಕುಮಾರಸ್ವಾಮಿ ೧೯೭೨
ಚಾಲೇಶ ೧೯೭೩
ಸಂಗ್ಯಾಬಾಳ್ಯಾ ೧೯೭೫
ಕಿಟ್ಟಿಯ ಕಥೆ ೧೯೭೪
ಜೈಸಿದ್ದನಾಯಕ ೧೯೭೫ .
ಆಲಿಬಾಬ ೧೯೮೦
ಕಾಡುಕುದುರೆ ೧೯೭೯ (ನಿಮಾ ಆಗಿದೆ. ಮತ್ತು ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.)
ಯಿಕಥೆ ೧೯೮೦
ಖಾರೋಖಾರ ೧೯೭೭
ಮತಾಂತರ ೧೯೭೮
ಹರಕೆಯ ಕುರಿ ೧೯೮೩ (ಸಿನಿಮಾ ಆಗಿದೆ. ರಾಷ್ಟ್ರಪ್ರಶಸ್ತಿ ಬಂದಿದೆ.)
ಸಾಂಬಶಿವ ಪ್ರಹಸನ ೧೯೮೭
ಸಿರಿಸಂಪಿಗೆ (೧೯೯೧ರ ನವದೆಹಲಿಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ)
ಹುಲಿಯ ನೆರಳು ೧೯೮೦ (ಸಿನೆಮಾ ಆಗಿದೆ)
ಬೋಳೆ ಶಂಕರ ೧೯೯೧
ಪುಷ್ಪರಾಣಿ ೧೯೯೧
ತಿರುಕನ ಕನಸು ೧೯೮೯
ಮಹಾಮಾಯಿ ೧೯೯೯.
ನೆಲಸಂಪಿಗೆ ೨೦೦೪
ಜಕ್ಕಣ ೨೦೦೮
ಶಿವರಾತ್ರಿ ೨೦೧೧
ಮಹಾಕಾವ್ಯ
ಚಕೋರಿ೧೯೯೬
ಕಾದಂಬರಿ
ಅಣ್ಣತಂಗಿ ೧೯೫೬
ಕರಿಮಾಯಿ ೧೯೭೫ – ಸಿನಿಮಾ ಆಗಿದೆ
ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ ೧೯೮೬
ಸಿಂಗಾರವ್ವ ಮತ್ತು ಅರಮನೆ ೧೯೮೨(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಶಿಖರ ಸೂರ್ಯ ೨೦೦೭
ಸಂಶೋಧನಾ ಗ್ರಂಥ
ಉತ್ತರ ಕರ್ನಾಟಕ ಜಾನಪದ ರಂಗಭೂಮಿ ೧೯೮೦
ಸಂಗ್ಯಾ ಬಾಳ್ಯಾ ೧೯೬೬
ಬನ್ನಿಸಿ ಹಾಡುವ ನನ ಬಳಗಅ ೧೯೬೮
ಬಯಲಾತಾಗಲು ೧೯೭೩
ಮಾತಾಡೊ ಲಿಂಗವೆ ೧೯೭೩
ನಮ್ಮ ಜನಪದ ೧೯೮೦
ಬಂದಿರೆ ನನ್ನ ಜೈಯೊಲಗೆ ೧೯೮೧
ಜಾನಪದ ವಿಶ್ವಕೋಶ ೧೯೮೫ (ಗ್ರಂಥದ ೨ ಸಂಪುಟವನ್ನು ಕನ್ನಡದಲ್ಲಿ ತಂದಿದ್ದಾರೆ)
ಬೆದರ ಹುಡುಗ ಮತ್ತು ಗಿಳಿ ೧೯೮೯ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ)
ಲಕ್ಷಪತಿ ರಾಜನ ಕಥೆ ೧೯೮೬
ಕಾಸಿಗೊಂದು ಸೇರು ೧೯೮೯
ನೆಲದ ಮರೆಯ ನಿಧಾನ ೧೯೯೩
ಬೃಹದ್ಧೇಸಿಯ ಚಿಂತನ ೨೦೦೧
An Anthology of Modern India Plays for the National School of Drama – ೨೦೦೦
ದೇಶಿಯ ಚಿಂತನ ೨೦೦೪
ಮರವೆ ಮರ್ಮರವೆ ೨೦೦೭
ಇದು ದೇಸಿ ೨೦೧೦
ಪ್ರಶಸ್ತಿ- ಪುರಸ್ಕಾರ:
⦁ ಅಕಾಡೆಮಿ ರತ್ನ ಪ್ರಶಸ್ತಿ ೨೦೧೧(ಕೇಂದ್ರ ಸಂಗೀತ ನಾಟಕ ಅಕಾಡೆಮಿ)
⦁ ಜ್ಞಾನಪೀಠ ಪ್ರಶಸ್ತಿ ೨೦೧೧
⦁ ದೇವರಾಜ ಅರಸ್ ಪ್ರಶಸ್ತಿ ೨೦೦೭
⦁ ಜೋಶು ಸಾಹಿತ್ಯ ಪುರಸ್ಕಾರಂ ೨೦೦೫ (ಆಂದ್ರಪ್ರದೇಶ ಸರಕಾರ)
⦁ ನಾಡೋಜ ಪ್ರಶಸ್ತಿ ೨೦೦೪ (ಹಂಪಿ ಕನ್ನಡ ವಿಶ್ವವಿದ್ಯಾಲಯ)
⦁ ಪಂಪ ಪ್ರಶಸ್ತಿ ೨೦೦೪
⦁ ಸಂತ ಕಬೀರ್ ಪ್ರಶಸ್ತಿ ೨೦೦೨
⦁ ೨೦೦೬ರ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷರು
⦁ ೨೦೦೪ ರಿಂದ ೨೦೧೦ರ ವರೆಗೆ ವಿಧಾನ ಪರಿಷತ್ ಸದಸ್ಯ
⦁ ಪದ್ಮಶ್ರೀ ಪ್ರಶಸ್ತಿ ೨೦೦೧
⦁ ಮಾಸ್ತಿ ಪ್ರಶಸ್ತಿ ೧೯೯೭ (ಕರ್ನಾಟಕ ಸರಕಾರ)
⦁ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ೧೯೯೩
⦁ ಸಿರಿಸಂಪಿಗೆ ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೧
⦁ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೯
⦁ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೮೮
⦁ ನಂದಿಕರ್ ಪ್ರಶಸ್ತಿ ೧೯೮೭ (ಕಲ್ಕತ್ತ)
⦁ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೭
⦁ ಸಂಗೀತ ನಾಟಕ ಅಕಾಡೆಮಿ ೧೯೮೩
⦁ ಕುಮಾರ ಆಶನ್ ಪ್ರಶಸ್ತಿ ೧೯೮೨ (ಕೇರಳ ಸರಕಾರ)
⦁ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ೧೯೭೫
⦁ ಮಧ್ಯಪ್ರದೇಶ ಸರ್ಕಾರ ಕೊಡುವ ಕಾಳಿದಾಸ ಸಮ್ಮಾನ್ ಪ್ರಶಸ್ತಿ
⦁ “ಜೋ ಕುಮಾರಸ್ವಾಮಿ” ನಾಟಕಕ್ಕೆ ೧೯೭೫ದ ಭಾರತೀಯ ಭಾಷೆಯ ಅತ್ಯುತ್ತಮ ನಾಟಕ – ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
⦁ ಶಿಖರ ಸೂರ್ಯ ಪುಸ್ತಕಕ್ಕೆ ಟ್ಯಾಗೋರ್‌ ಪ್ರಶಸ್ತಿ,

ಗಿರೀಶ್ ಕಾರ್ನಾಡ್

ಪರಿಚಯ:
ಗಿರೀಶ ಕಾರ್ನಾಡ್‌ರ ಹೆಸರು ಕನ್ನಡ ಸಾಹಿತ್ಯದಲ್ಲಿ ಬಹಳ ದೊಡ್ಡ ಹೆಸರು. ಇವರ ನಾಟಕಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ, ನಟರಾಗಿ ಇಡೀ ವಿಶ್ವದಲ್ಲೇ ಪ್ರಸಿದ್ದರಾದವರು.
ಜನನ ಬಾಲ್ಯ:
ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ|ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ|ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ೫ ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.
ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.
ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.
ವಿದ್ಯಾಭ್ಯಾಸ:
ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ Rhodes scholarship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು.
ಕನ್ನಡ ಸಾಹಿತ್ಯಕ್ಕೆ ಗಿರೀಶ ಕಾರ್ನಾಡ ಅವರ ಕೊಡುಗೆಗಳು:
ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ “ಯಯಾತಿ” ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ “ತುಘಲಕ್” ಹಾಗೂ “ಹಯವದನ” ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕ ರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನ ಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜುಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ.
ಕೃತಿಗಳು:
⦁ ಮಾ ನಿಷಾಧ – ಏಕಾಂಕ ನಾಟಕ
⦁ ಯಯಾತಿ – ೧೯೬೧
⦁ ತುಘಲಕ್ – ೧೯೬೪
⦁ ಹಯವದನ – ೧೯೭೨
⦁ ಅಂಜುಮಲ್ಲಿಗೆ – ೧೯೭೭
⦁ ಹಿಟ್ಟಿನ ಹುಂಜ ಅಥವಾ ಬಲಿ – ೧೯೮೦
⦁ ನಾಗಮಂಡಲ – ೧೯೯೦
⦁ ತಲೆದಂಡ – ೧೯೯೦
⦁ ಅಗ್ನಿ ಮತ್ತು ಮಳೆ – ೧೯೯೫
⦁ ಟಿಪ್ಪುವಿನ ಕನಸುಗಳು – ೧೯೯೭
⦁ ಒಡಕಲು ಬಿಂಬ – ೨೦೦೫
⦁ ಮದುವೆ ಅಲ್ಬಮ್
⦁ ಫ್ಲಾವರ್ಸ – ೨೦೧೨
⦁ ಬೆಂದ ಕಾಳು ಆನ್ ಟೋಸ್ಟ- ೨೦೧೨
ಪ್ರಶಸ್ತಿ- ಪುರಸ್ಕಾರ:
ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ.
⦁ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
⦁ ಗುಬ್ಬಿ ವೀರಣ್ಣ ಪ್ರಶಸ್ತಿ,
⦁ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
⦁ ಪದ್ಮಶ್ರೀ -೧೯೭೪
⦁ ಪದ್ಮಭೂಷಣ -೧೯೯೨
⦁ ಜ್ಞಾನಪೀಠ -೧೯೯೮
⦁ ಕಾಳಿದಾಸ ಸಮ್ಮಾನ್ – ೧೯೯೮

ಯು. ಅರ್.ಅನಂತಮೂರ್ತಿ

ಪರಿಚಯ:
ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕನ್ನಡ ಸಾಹಿತ್ ನವ್ಯ ಚಳುವಳಿಯ ಹರಿಕಾರರಗಿದ್ದವರು ಅನಂತ ಮೂರ್ತಿಯವರು.  ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.
ಜನನ ಬಾಲ್ಯ:
ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ‘ಮೇಳಿಗೆ’ ಹಳ್ಳಿಯಲ್ಲಿ, ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ.
ವಿದ್ಯಾಭ್ಯಾಸ:
ದೂರ್ವಾಸಪುರ’ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು.
ಕನ್ನಡ ಸಾಹಿತ್ಯಕ್ಕೆ ಅನಂತ ಮೂರ್ತಿ ಅವರ ಕೊಡುಗೆಗಳು:
ಕೃತಿಗಳು:
ಕಥಾ ಸಂಕಲನ
ಎಂದೆಂದೂ ಮುಗಿಯದ ಕತೆ (೧೯೫೫)
ಪ್ರಶ್ನೆ (೧೯೬೩)
ಮೌನಿ (೧೯೭೨)
ಆಕಾಶ ಮತ್ತು ಬೆಕ್ಕು (೨೦೦೧)
ಕ್ಲಿಪ್ ಜಾಯಿಂಟ್
ಘಟಶ್ರಾದ್ಧ
ಸೂರ್ಯನ ಕುದುರೆ (೧೯೮೧)
ಪಚ್ಚೆ ರೆಸಾರ್ಟ್ (೨೦೧೧)
ಬೇಟೆ, ಬಳೆ ಮತ್ತು ಓತಿಕೇತ
ಎರಡು ದಶಕದ ಕತೆಗಳು
ಮೂರು ದಶಕದ ಕಥೆಗಳು (೧೯೮೯)
ಐದು ದಶಕದ ಕತೆಗಳು (೨೦೦೨)
ಕಾದಂಬರಿಗಳು
    ಸಂಸ್ಕಾರ (೧೯೬೫)
ಭಾರತೀಪುರ (೧೯೭೩)
ಅವಸ್ಥೆ (೧೯೭೮)
ಭವ (೧೯೯೪)
ದಿವ್ಯ (೨೦೦೧)
ಪ್ರೀತಿ ಮೃತ್ಯು ಮತ್ತು ಭಯ (೨೦೧೨)
ವಿಮರ್ಶೆ ಮತ್ತು ಪ್ರಬಂಧ ಸಂಕಲನ
    ಪ್ರಜ್ಞೆ ಮತ್ತು ಪರಿಸರ (೧೯೭೧)
ಪೂರ್ವಾಪರ (೧೯೮೦)
ಸಮಕ್ಷಮ (೧೯೮೦)
ಸನ್ನಿವೇಶ (೧೯೭೪)
ಯುಗಪಲ್ಲಟ (೨೦೦೧)
ವಾಲ್ಮೀಕಿಯ ನೆವದಲ್ಲಿ (೨೦೦೬)
ಮಾತು ಸೋತ ಭಾರತ (೨೦೦೭)
ಸದ್ಯ ಮತ್ತು ಶಾಶ್ವತ (೨೦೦೮)
ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
ಋಜುವಾತು (೨೦೦೭)
ಶತಮಾನದ ಕವಿ ಯೇಟ್ಸ್ (೨೦೦೮)
ಕಾಲಮಾನ (೨೦೦೯)
ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
ಶತಮಾನದ ಕವಿ ರಿಲ್ಕೆ (೨೦೦೯)
ರುಚಿಕರ ಕಹಿಸತ್ಯಗಳ ಕಾಲ (೨೦೧೧)
ಆಚೀಚೆ (೨೦೧೧)
ನಾಟಕ
    ಆವಾಹನೆ (೧೯೬೮)
ಕವನ ಸಂಕಲನ
    ಹದಿನೈದು ಪದ್ಯಗಳು (೧೯೬೭)
ಮಿಥುನ (೧೯೯೨)
ಅಜ್ಜನ ಹೆಗಲ ಸುಕ್ಕುಗಳು (೧೯೮೯)
ಅಭಾವ (೨೦೦೯)
ಸಮಸ್ತ ಕಾವ್ಯ (೨೦೧೨)
ಆತ್ಮಕತೆ
    ಸುರಗಿ (೨೦೧೨)
ಚಲನಚಿತ್ರವಾದ ಕೃತಿಗಳು
ಸಂಸ್ಕಾರ
ಬರ
ಅವಸ್ಥೆ
ಮೌನಿ (ಸಣ್ಣಕಥೆ)
ದೀಕ್ಷಾ (ಹಿಂದಿ ಚಿತ್ರ)
ಪ್ರಕೃತಿ (ಸಣ್ಣಕಥೆ)
ಪ್ರಶಸ್ತಿ- ಪುರಸ್ಕಾರ:
ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ (ಕ್ರಮವಾಗಿ ೧೯೭೦, ೧೯೭೮, ೧೯೮೯)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೩)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೪)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಾಸ್ತಿ ಪ್ರಶಸ್ತಿ (೧೯೯೪)
ಜ್ಞಾನಪೀಠ ಪ್ರಶಸ್ತಿ (೧೯೯೪)
ಬಷೀರ್ ಪುರಸ್ಕಾರ, ಕೇರಳ ಸರ್ಕಾರ (೨೦೧೨)
ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ (೨೦೧೨)
ಗಣಕ ಸೃಷ್ಟಿ ಪ್ರಶಸ್ತಿ, ಕೋಲ್ಕತ (೨೦೦೨)
ಪದ್ಮಭೂಷಣ (೧೯೯೮)
ಶಿಖರ್ ಸಮ್ಮಾನ್ (ಹಿಮಾಚಲ ಪ್ರದೇಶ ಸರ್ಕಾರ) (೧೯೯೫)
೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ತುಮಕೂರು)

ವಿ.ಕೃ. ಗೋಕಾಕ್

ಪರಿಚಯ:
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.
ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು.
ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.
ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು.
ಅವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾ ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು.
ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು.
ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ರ ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು.
ಜನನ ಬಾಲ್ಯ:
ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣರಾವ್ ಗೋಕಾಕರು ೧೯೦೯ರ ಅಗಸ್ಟ್.೯ರಂದು ಅವಿಭಜಿತ ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು.
ವಿನಾಯಕರ ವಿದ್ಯಾಭ್ಯಾಸ ಸವಣೂರು ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡ ದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ.
ವಿದ್ಯಾಭ್ಯಾಸ:
ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು,
ಕನ್ನಡ ಸಾಹಿತ್ಯಕ್ಕೆ ಗೋಕಾಕ್ ಅವರ ಕೊಡುಗೆಗಳು:
ಕೃತಿಗಳು:
ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು.
“ಕಲೋಪಾಸಕರು”.
“ಸಮುದ್ರ ಗೀತೆಗಳು”,
“ಸಮುದ್ರದಾಚೆಯಿಂದ”- .
ಕನ್ನಡ ಸಾಹಿತ್ಯದಲ್ಲಿ “ನವ್ಯ” ಎಂಬ ಹೊಸಮಾರ್ಗ ಗೋಕಾಕರಿಂದಲೇ ಪ್ರಾರಂಭಗೊಂಡಿತು ಎಂಬ ಅಭಿಪ್ರಾಯವಿದೆ.
ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ “ಸಮರಸವೇ ಜೀವನ” ಗೋಕಾಕರದ್ದೇ ಕೃತಿ. “ಜನನಾಯಕ” ಅವರ ಸುಪ್ರಸಿದ್ಧ ನಾಟಕ.
“ಭಾರತ ಸಿಂಧು ರಶ್ಮಿ” ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ.
ಪ್ರಶಸ್ತಿ- ಪುರಸ್ಕಾರ:
೧. ಜ್ಞಾನಪೀಠ ಪ್ರಶಸ್ತಿ