ಶಾಂತಕ್ಕ ಶಾಂತಕ್ಕ ಚೆನ್ನಾಗಿದ್ದೀಯಾ?
ಮಂಚದ ಮ್ಯಾಲೆ ಮಲಗಿದ್ದೀಯಾ?
ಅಪ್ಪಾ ಬಂದರೆ ಅಳುತಿದ್ದೀಯಾ?
ಗಂಡಾ ಬಂದರೆ ನಗುತಿದ್ದೀಯಾ!
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಬಾಲ ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಶಾಂತಕ್ಕ ಶಾಂತಕ್ಕ ಚೆನ್ನಾಗಿದ್ದೀಯಾ?
ಮಂಚದ ಮ್ಯಾಲೆ ಮಲಗಿದ್ದೀಯಾ?
ಅಪ್ಪಾ ಬಂದರೆ ಅಳುತಿದ್ದೀಯಾ?
ಗಂಡಾ ಬಂದರೆ ನಗುತಿದ್ದೀಯಾ!
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಬಾಲ ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಆಚೆ ಮರಕ್ಕೂಂದ್ ಒಬ್ಬಿಟ್ಟು
ಈಚೆ ಮರಕ್ಕೂಂದ್ ಒಬ್ಬಿಟ್ಟು
ಹೊಂಗೆ ಮರಕ್ಕೆ ತಾಳಿ ಕಟ್ಟಿ ತಿಂಗಳಾಯ್ತು
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಪಂಚತಂತ್ರ ಕತೆಗಳು, ಬಾಲ ಗೀತೆಗಳು on ಜೂನ್ 6, 2017| Leave a Comment »
ಕಾಗೆ ಕಾಗೆ ಕವ್ವ!
ಯಾರು ಬಂದಾರವ್ವ
ಮಾವ ಬತ್ತಾನವ್ವ!
ಮಾವನಿಗೇನ್ ಊಟ?
ರಾಗಿ ಕಲ್ಲಿನ್ ಗೂಟ !
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಕಪ್ಪೆ ಕಲಕಲ, ತುಪ್ಪ ಜಲಿಜಲಿ
ಮಾವಿನ ವಾಟೆ, ಮರದಲಿ ಪೋಟೆ
ಹದ್ದಿನ ಕೈಲಿ ಸುದ್ದಿ ಕಳಿಸಿ
ಕಾಗೆ ಕೈಲಿ ಕಂಕಣ ಕಟ್ಟಿಸಿ
ಸಣ್ಣಿ ಮದುವೆ ಶನಿವಾರ
ಊಟಕ್ಕ್ ಬನ್ನಿ ಬುದುವಾರ
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, ಮಕ್ಕಳ ಆಟಗಳು on ಜೂನ್ 6, 2017| Leave a Comment »
ಕೈ ಕೈ ಎಲ್ಲೋಯ್ತು?
ಕದದ ಮೂಲೆಗೋಯ್ತು!
ಕದ ಏನ್ ಕೊಡ್ತು?
ಚಕ್ಕೆ ಕೊಡ್ತು!
ಚಕ್ಕೆ ಏನ್ ಮಾಡ್ದೆ?
ಒಲೆಗ್ ಹಾಕ್ದೆ
ಒಲೆ ಏನ್ ಕೊಡ್ತು?
ಬೂದಿ ಕೊಡ್ತು!
ಬೂದಿ ಏನ್ ಮಾಡ್ದೆ?
ತಿಪ್ಪೆಗ್ ಹಾಕ್ದೆ!
ತಿಪ್ಪೆ ಏನ್ ಕೊಡ್ತು?
ಗೊಬ್ಬರ ಕೊಡ್ತು!
ಗೊಬ್ಬರ ಏನ್ ಮಾಡ್ದೆ?
ಗದ್ದೆಗ್ ಹಾಕ್ದೆ!
ಗದ್ದೆ ಏನ್ ಕೊಡ್ತು?
ಗರಿಕೆ ಕೊಡ್ತು!
ಗರಿಕೆ ಏನ್ ಮಾಡ್ದೆ?
ಹಸುಗ್ ಹಾಕ್ದೆ!
ಹಸು ಏನ್ ಕೊಡ್ತು?
ಹಾಲು ಕೊಡ್ತು!
ಹಾಲೇನ್ ಮಾಡ್ದೆ?
ನಾನ್ ಒಸಿ ಕುಡ್ದು, ನಿನ್ಗ್ ಒಸಿ ಮಡಗಿದ್ದೆ
ಕೊತ್ತಿ ಕುಡ್ಕೊಂಡ್ ಹೊಂಟೋಯ್ತು
ಕೃಪೆ – ಪ್ರೊ. ಎಂ. ಕೃಷ್ಣೇಗೌಡ
Posted in ಜನಪದ ಕತೆ-ಗೀತೆಗಳು, tagged ಜನಪದ ಗೀತೆ on ನವೆಂಬರ್ 3, 2016| Leave a Comment »
ನನ್ನಯ್ಯನಂತೋರು ಹನ್ನೆರಡು ಮಕ್ಕಳು
ಹೊನ್ನೇಯ ಮರದ ನೆರಳಾಗ | ಆಡುವಾಗ
ಸನ್ಯಾಸಿ ಜಪವ ಮರೆತಾನ
ತೊಟ್ಟಿಲಿನೊಳಗೆ ಪುಟ್ಟ ಕಂದ ಮಲಗ್ಯವನೆ
ಸೃಷ್ಟಿಗೊಡೆಯನ ಮಡದಿ | ಪಾರ್ವತಿ ದೇವಿ
ದೃಷ್ಟಿ ತಗಲ್ಯಾವು ತೆರೆ ಹಾಕ
ತೋಳುದ್ದ ತಲೆಗಿಂಬು ಮಾರುದ್ದ ಹಾಸೀಗಿ
ಮಾಣಿಕದಂತ ಮಗು ಮುಂದ | ಮಲಗಿದರ
ಮಾರಯ್ರ ಗೊಡವೆ ನನಗೇನ
ಹಸಿರಂಗಿ ತೊಡಸೀದ ಹಾಲ್ಗಡಗ ಇಡಸೀದ
ಹಳ್ಳಕ್ಕೆ ನೀನು ಬರಬೇಡ | ನನ ಕಂದ
ಬೆಳ್ಳಕ್ಕಿ ಹಿಂಡು ಬೆದರ್ಯಾವ
ಆಸರಿಕಿ ಬ್ಯಾಸರಿಕಿ ಯಾರಿಂದ ಕಳೆಯಾಲೆ
ಕೂಸು ಕಂದಯ್ಯ ತೊಡಿಮ್ಯಾಲೆ | ಆಡಿದರ
ಬಂದ ಬ್ಯಾಸರಿಕಿ ಬಯಲಾಗಿ
ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು | ಕಂದಯ್ಯ
ಜ್ಯೋತಿಯೇ ಆಗು ಜಗಕೆಲ್ಲ