Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಕವನ’ Category

ಕವಿ: ಸಿದ್ದಯ್ಯ ಫುರಾಣಿಕ

ಹೊತ್ತಿತೊ ಹೊತ್ತಿತು ಕನ್ನಡದ ದೀಪ
ಮುಗಿಯಿತೊ ಮುಗಿಯಿತು ಶತಮಾನಗಳ ಶಾಪ

ಕಣ್ಣು ಕುಕ್ಕಿಸುವಂತೆ ದೇದಿಪ್ಯಮಾನ
ಹರ್ಶವುಕ್ಕಿಸುವಂತೆ ಶೊಭಾಯಮಾನ
ಕನ್ನಡದ ಮನೆಯಾಗೆ ಜ್ಯೊಥಿರ್ನಿದಾನ
ಕನ್ನಡದ ಪ್ರಾಣ ಕನ್ನಡದ ಮಾನ

ಉರಿವವರು ಬೇಕಿದನು ಇದರೆಣ್ಣೆಯಾಗಿ
ಸುಡುವವರು ಬೇಕಿದನು ನಿಡುಬತ್ತಿಯಾಗಿ
ಧರಿಸುವರು ಬೇಕಿದನು ಸಿರಿಹಣಥೆಯಾಗಿ
ನನ್ನೆಸುರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜಗಕೆಲ್ಲ ಬೆಳಕಾಗಿ ಪುಣ್ಯಪ್ರದೀಪ
ಭಾರತಕೆ ಬಲವಾಗಿ ಭವ್ಯಪ್ರದೀಪ
ಕಳೆಯುತ್ತ ತಾಪ ಬೆಳೆಸುತ್ತ ಸಹಿಪ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Read Full Post »

ಕವಿ : ಹುಯಿಲಗೋಳ ನಾರಾಯಣರಾಯರು

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

Read Full Post »

ಕವಿ : ಜಿ.ಎಸ್.ಶಿವರುದ್ರಪ್ಪ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ಎನಗಿಲ್ಲ ಚಿಂತೆ

Read Full Post »

ನಿತ್ಯೋತ್ಸವ

ಕವಿ: ನಿಸಾರ್ ಅಹಮದ್

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಹಲವೆನ್ನದ ಸಿರಿಮೆಯೇ ಕುಲವೆನ್ನದ ಗರಿಮೆಯೇ
ಸದ್ವಿಕಾಸ ಶೀಲ ನುಡಿಯ ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ

Read Full Post »

ಕೊಳಿಕೆರಂಗ

ರಚನೆ : ಟಿ.ಪಿ.ಕೈಲಾಸಂ

ನಾನುಟ್ಟಿದ್ ವಡ್ಡ್ರಳ್ಳಿ
ಬೆಳೆದಿದ್ದು ಬ್ಯಾಡ್ರಳ್ಳಿ
ಮದುವೆ ಮಾದನ್ ಒಲ್ಗೊಳಾರ್ನಳ್ಳಿ
ನಮ್ ಶ್ಯಾನಭೊಗಯ್ಯ ಅಲ್ದೆ ಶೇಖದಾರಪ್ಪ
ಇವರೆಲ್ಲ ಕಂಡವ್ರೆ ನನ್ನ್
ನನ್ನೆಲ್ಡು ಮಕ್ಕಳ್ನು ಎಂಡ್ರ್ನುವೆ
ಅಟ್ಟಿ ಅವ್ವೇನು ಬಿಟ್ಟಿವ್ನೀ ನಾ
ನಿಮ್ಮುಂದೆ ನಿಂತೀವ್ನಿ ನಾ
ನಮ್ಮಳ್ಳಿ ಕಿಲಾಡಿ ಉಂಜ
ನಾನು ಕೊ….ಳಿಕೆರಂಗ
ನಾನು ಕೊ….ಳಿಕೆರಂಗ
ಕೊನುಳಿನುಕೆನುರನುಸೊನ್ನೆಯುನುಗ
ನಾನು ಕೊ….ಳಿಕೆರಂಗ
ನಮ್ ತಿಪ್ಪಾರಳ್ಳಿ ಬೊರನ್ ಅಣ್ಣನ್ ತಮ್ಮನ್ ದೊಡ್ಡ್ಮಗ
ಕಕೊತ್ವಳಿ ಕಕೆತ್ವರ ಮತ್ ಸೊನ್ನೆಯುನುಗ
ಇದನ್ ಒದಕ್ ಬರ್ದೆ ಬಾಯ್ ಬಿಡೊನು ಬೆಪ್ ನನ್ನ್ಮಗ

ಎತ್ತು ಕುದುರೆ ಇಲ್ಲದ್ ಗಾಡಿಗಳು
ಎಣ್ಣೆ ಬತ್ತಿ ಇಲ್ಲದ್ ದೀಪಗಳು
ತುಂಬಿದ್ ಮೈಸೂರಿಗ್ ಬಂದೆ
ದೊಡ್ ಗಡಿಯಾರದ ಹಿಂದೆ
ದೊಡ್ ಚೌಕದ ಮುಂದೆ
ಕಟ್ತ್ಂದಿದ್ ಬುತ್ತಿನ ತಿಂತಿದ್ದೆ
ಅಲ್ಲೆ ಕುದ್ರೆಮೇಲೆ ಕುಂತಿದ್ದೊಬ್ಬ ಸಾವರಯ್ಯ
ಕೆದರಿದ್ ತನ್ ಮೀಸೆ ಮೆಲೆ ಹಾಕ್ದ ಕಯ್ಯ
ಗದರಿಸ್ತಾಲಿ ನನ್
ಬೆದರಿಸ್ತಾಲಿ
ಏ ನೀನ್ ಯಾರು ನೀನ್ ಯಾಕೊ
ನಾನ್ ನಾನು ಕೋಳಿಕೆ ರಂಗ
ನಾನು ಕೊ….ಳಿಕೆರಂಗ
ಕೊನುಳಿನುಕೆನುರನುಸೊನ್ನೆಯುನುಗ
ನಾನು ಕೊ….ಳಿಕೆರಂಗ
ನಮ್ ತಿಪ್ಪಾರಳ್ಳಿ ಬೊರನ್ ಅಣ್ಣನ್ ತಮ್ಮನ್ ದೊಡ್ಡ್ಮಗ
ಕಕೊತ್ವಳಿ ಕಕೆತ್ವರ ಮತ್ ಸೊನ್ನೆಯುನುಗ
ಇದನ್ ಒದಕ್ ಬರ್ದೆ ಬಾಯ್ ಬಿಡೊನು ಬೆಪ್ ನನ್ನ್ಮಗ

Read Full Post »

ಕವಿ – ಮಾಸ್ತಿ ವೆಂಕಟೇಶ್ ಐಯಂಗಾರ್

ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಣ ಬಯಲಿಂದ ಮೇಲಕ್ಕೇ ಹಾರಿ
ದೂರಾದ ಮಲೆಯ ತಲೆಯಾನೇ ಎರಿ
||ನೇಸರ ನೋಡು||
ಹೊರಳೀತು ಇರುಳು ಬೆಳಕೀನ ಬೂಡು
ತೆರೆಯೀತು ನೊಡು ಬೆಳಗೀತು ನಾಡು
||ನೇಸರ ನೋಡು||

Read Full Post »

« Newer Posts - Older Posts »