ಕವಿ : ಎಚ್.ಎಸ್.ವೆಂಕಟೇಶ ಮೂರ್ತಿ
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತವೊ
ಅರಿತೆವೇನು ನಾವು ನಮ್ಮ ಅಂತರಾಳವ
ಕಡಲ ಮೇಲೆ ಸಾವಿರಾರು ಮೈಲಿ ಸಾಗಿರು
ನೀರಿನಾಳ ತಿಳಿಯಿತೇನು ಹಾಯಿ ದೊಣಿಗೆ
ಸದಾ ಕಾಲ ತಬ್ಬುವಂತೆ ಮೇಲೆ ಬಾಗಿರು
ಮಣ್ಣ ಮುಟ್ಟು ದೊರಕಿತೇನು ನೀಲಿ ಬಾನಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೊರಿದೆ
ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ
ಬಾಲು ಅವರೇ…..
ಒಂದಾದಮೇಲೊಂದರಂತೆ ನನಗೆ ಅತ್ಯಂತ ಪ್ರಿಯವಾದ ಹಾಡುಗಳನ್ನೇ ಹಾಕುತ್ತಿದ್ದೀರಿ.. ಧನ್ಯವಾದಗಳು ಎನ್ನಲೇ… ಎಷ್ಟು ಅರ್ಥಭರಿತ, ಸುಂದರೆ, ಬದುಕಿಗೆ ಹೋಲಿಸಿದ, ಸರಳ ರಚನೆ……. ಆದರೆ ಅದರ ಆಳ ಮಾತ್ರ ಅಪಾರ…….
ಶ್ಯಾಮಲ