Posted by: Bala | ಸೆಪ್ಟೆಂಬರ್ 22, 2009

ತನು ಕರಗದವರಲ್ಲಿ …

ಅಕ್ಕ ಮಹಾದೇವಿಯ ವಚನ

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂದಾಕ್ಷತೆಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ

Advertisements

Responses

  1. ಬಾಲಉ ಅವರೆ…….ಈ ಹಾಡು ನನ್ನ ಮೆಚ್ಚಿನದು. ಇಲ್ಲಿಯವರೆಗೆ ನೂರಾರು ಸಲ ಕೇಳಿದ್ದರೂ, ಕೇಳುತ್ತಲೇ ಇದ್ದರೂ ಬೇಸರವಾಗದಂತಹುದು. ನೀವು ಹಾಕಿದ ಕೊಂಡಿಯಲ್ಲೂ ೪ ಸಲ ಕೇಳಿದೆ……. ಧನ್ಯವಾದಗಳು……..
    ಶ್ಯಾಮಲ

  2. ಶ್ಯಾಮಲಾ ಅವರೆ,
    ನಿಮ್ಮ ಮಾತು ನಿಜ, ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನ್ನುವ ಹಾಗು ತುಂಬಾ ಅರ್ಥಗರ್ಭಿತವಾದ ಹಾಡು. ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: