ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ
ನೀ ಕೇಳಿದಾಗ ಕೊಡುವೇನು||
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ
ಮಕ್ಕಳಿರಲವ್ವ ಮನೆತುಂಬ||
ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಂಗೆ
ಜೋಗೂಳದಾಗೆ ಅತಿಮುದ್ದು||
ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ
ಹತ್ತು ಮಕ್ಕಳೂ ಇರಬಹುದು||
ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||
ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ
ಮೊಸರ್ಬೇಡಿ ಕೆಸರ ತುಳದಾನ|
ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ
ಅತ್ತರ ಅಳಲವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ |
ಸಮರ್ಥನಂಥ ಮಕ್ಕಲಿರಲೆವ್ವ ಮನಿಯಾಗ
ಅಕಿ ನನ್ನ ಶಿವಾನಿ ಮಾತೀಲಿ ಶ್ಯಾನ್ಯಾಕಿ
ಮಾತ ಮಾತೀಗಿ ನಗುವಾಕಿ | ಶಿವಾನಿ
ಮಾತ ಬಲ್ಲವರ ಮಗಳವ್ವ
ಅತ್ತರ ನನ ಕಂದನ ಮುತ್ತೆಲ್ಲಿ ಉದರ್ಯಾವ
ಸತ್ತೀಗಿ ಮಾನೆದ ಹೊಲದಾಗ |
ಅವರನ್ನ ಸುಪ್ಪಲಿ ಒಯ್ದ ಬಳತಂದ
ಅತ್ತ ಕಾಡವನಲ್ಲ ಮತ್ತ ಬೇಡವನಲ್ಲ
ಮೆತ್ತನ್ನ ಎರಡು ಕೈ ಮುಟಗಿ (ಸ್ಯಾಂಡ್ವಿಚ್) ಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗ್ಯಾನ
ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ | ನನ ಕಂದನ
ನಿನ್ನ ತೊಟ್ಟಿಲ ಗಾಳಿ ಮನೆತುಂಬಾ
ಅಳಬುರುಕ ಗಿಳುಬುರುಕ ಇದ ಎಂಥ ಮಗನವ್ವ
ಉಣಗೊದದ ರೊಟ್ಟಿ ಸುದಗೊದದ | ನನ ಮಗನ
ಎತ್ತಿ ಕೊಲ್ಲವರು ಯಾರಿಲ್ಲ
ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ
ರಾಮದೇವರಂತ ಮಗ ಬೇಕ |
ನಮ್ಮನಿಗೆ ಜಾನಕಿಯಂತ ಸೊಸೆ ಬೇಕು
ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ
ಕೃಷ್ಣದೇವರಂತ ಮಗ ಬೇಕ | ನನ ಸಮರ್ಥ
ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ
ಸಂಗಮಕ ಹೋಗಾಕ ಸಂಗಾಟ ಮಗ ಬೇಕ
ತಂಬಿಗಿ ಹಿಡಿಯಾಕ ಸೋಸಿ ಬೇಕ |
ಕೂಡಲ ಸಂಗಮಕ ಹೋಗಿ ಬರಬೇಕ
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗಿ ಎತ್ತು ದುಡಿಧಂಗ |
ಬಾಳೆಲಿ ಹಾಸುಂದ ಬೀಸಿ ಒಗೆಧಂಗ
This song is just excellent
ಮುರಾರಿಯವರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
-ಬಾಲ
4 ne class alli odida nenapu…..
“hasumakkalaadidare hasanavva angala
dese mukhadavanu nana kanda| aadidare….”
kone line martu hogide 😀
nimma blogu tumba chanagide 🙂
chi ಅವರೆ
ಧನ್ಯವಾದಗಳು
-ಬಾಲ
i wanted a janapada tripadi and luckily your blog had it.
thank u sooooooooooooooooooooooooooooooooooooooo much
u saved me
Carel,
I am glad it helped you and thanks for your comment.
-Bala.
adi ba ena kanda
angala toledena
tengina kayi tilinira|
tengina kayi tilinira takkondu
bangarada more toledena.
ಸಿದ್ದು ಅವರೆ,
ನೀವು ಹೇಳಿರುವ ಗೀತೆಯನ್ನ ಸಂಗ್ರಹದಲ್ಲಿ ಸೇರಿಸಿದ್ದೇನೆ. ಗೀತೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಬಾಲ.
kottu kudiyalu beda
yittu hangisa beda
yestundarendu anabeda
yestundarendu anabeda kandayya
mttyava shivana sadarigi|
i like this blog very muchhhhhhhhhhhhhhhh.
ಸಿದ್ದು ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
ಬಾಲ
attaan karedaan,
matyan bedyan,
methaan mura dhumkav,
methan ni mura dhumakav hakidar
gappa chippenda maligyan.
saali hudugurolaga-
shanya nan uday
yada balak sodarathar ni sariy.
barappa balegara, aar ankan padesali,
aadali hogyal ratirambhi, aadali hogyal ratirambhi —,
bannad bisunaki, ninyar badedar
Kashi kagad mele estonda akshar
kusa srikant baredan,
kusa srikant baredu akshar kandu
sahebarella kushiyagi.
thank uuuuuuuuuuuuuuuuuuuuu very much for this beautiful tripadi
it is the best site for janapada songs
This is a awsome song
Wah superb nan balyakke nanu hogidde annisthide amman nenapu thumba agthaede nim blogs sakkathagide thanks for that…
malamanjunath
hey i wanted 5 janapada tripadi for my project can you please help me i will be very greatfull to yuo
but thank you 4 at least one
Katie,
do you want tripadi other than the ones I have given above?
Try in the below link you get lot more tripadi’s.
http://web.missouri.edu/~chandrasekharh/kannada/JANAPADA/janapada.html
nantaru bandiru kulige akkilla naa tolu battu nandalla. naa tolu battu nandalla nantare hottidange holi datakani.hnaa…hnooo
ಪ್ರಶಾಂತ್,
ಗೀತೆಯನ್ನು ಕನ್ನಡದಲ್ಲಿ ಬರೆದಿದ್ದರೆ ಅರ್ಥವಾಗುತ್ತಿತ್ತು. ದಯವಿಟ್ಟು ಕೆಳಗಿನ ಲಿಂಕ್ ಉಪಯೋಗಿಸಿ ಕನ್ನಡದಲ್ಲಿ ಬರೆದು ತಿಳಿಸಿ.
http://www.google.com/transliterate/Kannada
ಧನ್ಯವಾದಗಳು
ಬಾಲ
TUMBA CANNAGIDE EE TARO ADU NANU YALLU NODERALLILA .
YAAAAAAAAAAAA
Thank you
very nice
janapada songs!!!!!!!!!!!!!!!!!!!!!!!!!!!
i want more
please post many janapada tripadi
Thanks for this nice blog..I have added few more
ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ
ಮೊಸರ್ಬೇಡಿ ಕೆಸರ ತುಳದಾನ|
ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ
ಅತ್ತರ ಅಲಲೆವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ |
ಸಮರ್ಥನಂಥ ಮಕ್ಕಲಿರಲೆವ್ವ ಮನಿಯಾಗ
ಅಕಿ ನನ್ನ ಶಿವಾನಿ ಮಾತೀಲಿ ಶ್ಯಾನ್ಯಾಕಿ
ಮಾತ ಮಾತೀಗಿ ನಗುವಾಕಿ | ಶಿವಾನಿ
ಮಾತ ಬಲ್ಲವರ ಮಗಳವ್ವ
ಅತ್ತರ ನನ ಕಂದನ ಮುತ್ತೆಲ್ಲಿ ಉದರ್ಯಾವ
ಸತ್ತೀಗಿ ಮಾನೆದ ಹೊಲದಾಗ |
ಅವರನ್ನ ಸುಪ್ಪಲಿ ಒಯ್ದ ಬಳತಂದ
ಅತ್ತ ಕಾಡವನಲ್ಲ ಮತ್ತ ಬೇಡವನಲ್ಲ
ಮೆತ್ತನ್ನ ಎರಡು ಕೈ ಮುಟಗಿ (ಸ್ಯಾಂಡ್ವಿಚ್) ಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗ್ಯಾನ
ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ | ನನ ಕಂದನ
ನಿನ್ನ ತೊಟ್ಟಿಲ ಗಾಳಿ ಮನೆತುಂಬಾ
ಅಳಬುರುಕ ಗಿಳುಬುರುಕ ಇದ ಎಂಥ ಮಗನವ್ವ
ಉಣಗೊದದ ರೊಟ್ಟಿ ಸುದಗೊದದ | ನನ ಮಗನ
ಎತ್ತಿ ಕೊಲ್ಲವರು ಯಾರಿಲ್ಲ
ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ
ರಾಮದೇವರಂತ ಮಗ ಬೇಕ |
ನಮ್ಮನಿಗೆ ಜಾನಕಿಯಂತ ಸೊಸೆ ಬೇಕು
ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ
ರಾಮದೇವರಂತ ಮಗ ಬೇಕ |
ನಮ್ಮನಿಗೆ ಜಾನಕಿಯಂತ ಸೊಸೆ ಬೇಕ
ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ
ಕೃಷ್ಣದೇವರಂತ ಮಗ ಬೇಕ | ನನ ಸಮರ್ಥ
ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ
ಸಂಗಮಕ ಹೋಗಾಕ ಸಂಗಾಟ ಮಗ ಬೇಕ
ತಂಬಿಗಿ ಹಿಡಿಯಾಕ ಸೋಸಿ ಬೇಕ |
ಕೂಡಲ ಸಂಗಮಕ ಹೋಗಿ barabeka
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗಿ ಎತ್ತು ದುಡಿಧಂಗ |
ಬಾಳೆಲಿ ಹಾಸುಂದ ಬೀಸಿ ಒಗೆಧಂಗ
ತುಂಬಾ ಚೆನ್ನಾಗಿದೆ ಸರ್ ನಮಸ್ಕಾರ ಧನ್ಯವಾದಗಳು ತಮಗೆ
ಆಡಿ ಬಅ ಎನ ಕಂದ ಮಕ್ಕಳ ಜಾನಪದ ಗೀತೆ ತಮ್ಮ ಬಳಿ ಲಭ್ಯವಿದ್ದರೆ ದಯವಿಟ್ಟು ಬ್ಲಾಗ್ ಗೆ ಲೋಡ್ ಮಾಡಿ ……ನಾಗಮಣಿ ಸಿ.ಎನ್.
ನನ್ನಯ್ಯ/ನಂತೋರು/ಹನ್ನೆರಡ/ಮಕ್ಕಳ
ಹೊನ್ನೆಯ/ಮರದ/ನೆರಳಲ್ಲಿ/ಆಡುವಾಗ/
ಸನ್ಯಾಸಿ/ಜಪವ/ಮರೆತಾನ||
sir adi ba kandaya angala toladena song bekittu
My mother and Sister still uses this song to pacify my Nephew… I have listened to it so many times that, literally I have memorized the same…. I have added couple of lines to this …
ಕೂಸು ಕುಂಜಿಗೆ ತಿಂತು, ಹಾಸಿಗೆ ನೆಲ ತಿಂತು, ಮಾಡಿಟ್ಟ ಅಡಿಗೆ ಒಲಿ ತಿಂತು.
ಮಾಡಿಟ್ಟ ಅಡಿಗೆ ಒಲಿ ತಿಂತು, ಕೂಸಿನ ಮಾವನ ಗಡ್ಡ ಇಲಿ ತಿಂತು…. ಜೋ ಜೋ…
Sir, I want 25 tripadis for my tenth project work. want it as soon as possible…
I love this blog sooooooòooooooooomuch😙😙😙😙😙😙😙😙😙
Very nice sir,….
but the last one ” Hasu makkaladidare hasanavva angala” is incomplete can any body pls complete it?
ಬಾರೋ ಬಾರೋ ನಮ್ಮ ಭಕ್ತ ವಾತ್ಸಲ ಸ್ವಾಮಿ
ಬಾರೋ ಪಾಂಡವರ ಅಭಿಮಾನಿ
ಅಭಿಮಾನಿ ಬಾ ಎಂದು
ನಾರಿ ದ್ರೌಪತಿಯು ಕರೆದಾಳ
ಸರ ನನಗೆ ಯುದ್ದಬಂದಿತು ಸಿದ್ದರಾಗಿರಿ ಇಂದೆ ಸೀಮೋಲಂಗನ ಹಾಡು ಸಿಗುವ ಲಿಂಕ ತಿಲಿಸಬಹುದಾ
Kottu kudiyalu beda, ittu hangisa beda, eshtundarendu anabeda..!!
Ee padyada modala saalugalu yarigadru gothidhare thilisi. Tumba dinagalinda huduktha idhini.
Dhanyavadagalu
ಜನಪದ ಹಾಡುಗಳನ್ನು ಒದಿ ತುಂಬಾ ಸಂತೋಷವಾಯಿತು. ಧನ್ಯವಾದಗಳು ಸರ್……..
thank u this janapada poem ws very nice & helpful 4 project works thq again
Thank you very much I wantd tripadis badly
ಮಕ್ಕಳಾಟವು ಚಂದ ಮತ್ತೆ ಯವ್ವನ ಚಂದ
ಮುಪ್ಪಿನಲಿ ಚಂದ ನರೇಗಡ್ಡ ||….
Again last line forgotten, can anyone help please 🙂
ಕನ್ನಡದಲ್ಲಿನ ನುಡಿಮುತ್ತುಗಳನ್ನು ಕನ್ನಡಿಗರಿಗಾಗಿ ಒದಗಿಸಿಕೊಡುವ ನಿಮ್ಮ ಈ ಪ್ರಯತ್ನ ಪ್ರಶಂಸಾರ್ಹವಾದುದು. ನಾನು ಹುಡುಕುತ್ತಿರುವ ಈ ಹಾಡು ನನಗೆ ಸಿಕ್ಕಿದ್ದಕ್ಕೆ ಆದ ಖುಷಿ ಅಷ್ಟಿಷ್ಟಲ್ಲ. ದಯವಿಟ್ಟು ನಿಮ್ಮ ಕೆಲಸವನ್ನು ಮುಂದುವರೆಸಿ.
ತುಂಬಾ ಸುಂದರವಾದ ಮಕ್ಕಳ ಪಧ್ಯ ಧನ್ಯವಾದಗಳು
Awesome. Thank you foe this !! I miss you Ajji ☹️