Category Archives: ಚಿತ್ರ ಗೀತೆಗಳು

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು

ಸಾಹಿತ್ಯ : ಆರ್.ಎನ್. ಜಯಗೋಪಾಲ್ ಸಂಗೀತ : ವಿಜಯಭಾಸ್ಕರ್ ಗಾಯನ : ಬಿ.ಕೆ. ಸುಮಿತ್ರ ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು ಚಿಕ್ಕವ್ವ..ಚಿಕ್ಕವ್ವ..ಎನ್ನುತ ತನ್ನಯ ಗೆಳೆಯರ ಕರೆದಿತ್ತು ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು ಟಣ್ ಡಣ್ ಟಣ್ ಡಣ್..ಎನ್ನುತ ಸೇವೆಗೆ ಎಲ್ಲರ ಕರೆದಿತ್ತು ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ [...]

ಹಾಡೊಂದ ಹಾಡುವೆ ನೀ ಕೇಳು ಮಗುವೆ

ಚಿತ್ರ : ನಾಂದಿ ಗಾಯಕ : ಪಿ.ಬಿ.ಶ್ರೀನಿವಾಸ್ ಹಾಡೊಂದ ಹಾಡುವೆ ನೀ ಕೇಳು ಮಗುವೆ ಬರಿದಾದ ಮನೆ ಬೆಳಗೆ ನೀನೆಂದು ಬರುವೆ ಸೀಮಂತದಾನಂದ ನಾ ನೀಡಲಿಲ್ಲ ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ ಸಿರಿವಂತರಾ ಭೊಗ ನಿನಗಿಲ್ಲಿ ಇಲ್ಲಾ ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲಾ ||ಹಾಡೊಂದ ಹಾಡುವೆ|| ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ ಅದ ಕೇಳೊ ಸೌಭಾಗ್ಯ ಈ ತಾಯಿಗಿಲ್ಲಾ ಇವಳಾಸೆ ಆಕಾಂಕ್ಷೆ ನೀನಾದೆ ಎಲ್ಲಾ ||ಹಾಡೊಂದ [...]

ನೇಸರ ನೊಡು

ಕವಿ – ಮಾಸ್ತಿ ವೆಂಕಟೇಶ್ ಐಯಂಗಾರ್ ನೇಸರ ನೋಡು ನೇಸರ ನೋಡು ನೇಸರ ನೋಡು ನೇಸರ ನೋಡು ಮೂಡಣ ಬಯಲಿಂದ ಮೇಲಕ್ಕೇ ಹಾರಿ ದೂರಾದ ಮಲೆಯ ತಲೆಯಾನೇ ಎರಿ ||ನೇಸರ ನೋಡು|| ಹೊರಳೀತು ಇರುಳು ಬೆಳಕೀನ ಬೂಡು ತೆರೆಯೀತು ನೊಡು ಬೆಳಗೀತು ನಾಡು ||ನೇಸರ ನೋಡು||

ಅನಂತ ಪ್ರಣಯ

ಕವಿ – ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೇಸುತಿದೆ ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಭಿಸಿ ನಗೆಯಲಿ ಮೀಸುತಿದೆ ಭೂರಂಗಕೆ ಅಭಿಸಾರಕೆ ತಿಂಗಳು ತಿಂಗಳು ನವೆಯುತಿದೆ ತುಂಬುತ ತುಳುಕುತ ತೀರುತ ತನ್ನೊಳು ತಾನೆ ಸವಿಯನು ಸವಿಯುತಿದೆ ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು ಮಿತ್ರನ ಮೈತ್ರಿಯ ಒಸಗೆ ಮಸಗದೆ ಮರುಕದ ಧಾರೆಯ ಮಸೆಯಿಸಿತು ಅಕ್ಷಿನಿಮಿಲನ ಮೂಡದೆ ನಕ್ಷತ್ರದ ಗಣ ಗಗನದಿ ಹಾರದಿದೆ ಬಿದಿಗೆಯ ಬಿಂಬಾಧರದಲಿ ಇಂದಿಗು [...]

Follow

Get every new post delivered to your Inbox.