ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.
-
ಬಾಲವನದ ಪುಟಗಳು
-
ವಿಭಾಗಗಳು
-
ಇತ್ತೀಚಿನ ಬರಹಗಳು
-
ಮೆಚ್ಚಿದ ಬರಹಗಳು
-
ಹಿಂದಿನ ಬರಹಗಳು
-
Blogroll
ಹೊಸ ವರ್ಷದಲ್ಲಿ ನಿಮ್ಮೆಲ್ಲ ಆಸೆ ಆಕಾಂಕ್ಷೆಗಳು ಈಡೇರಲಿ ಎಂಬ ಹಾರೈಕೆಗಳೊಡನೆ, ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ನಗರದ ಪ್ರಖ್ಯಾತ ಕಳ್ಳನಿಗೆ ಹೊಸ ಚಿಂತೆಯೊಂದು ಶುರುವಾಯಿತು. ತನ್ನ ಎಳೆಯ ಮಗ ಇನ್ನೂ ಕಳ್ಳತನವನ್ನು ಕಲಿಯುವುದರಲ್ಲಿ ಯಾವ ಆಸಕ್ತಿಯನ್ನೂ ತೋರಿರಲಿಲ್ಲ, ಹೀಗೆ ಮುಂದುವರೆದರೆ ತನ್ನ ಮರಣಾನಂತರ ಮಗ ಹೇಗೆ ಬದುಕಬಲ್ಲ, ಎಂಬ ಚಿಂತೆ ಕಾಡತೊಡಗಿತು. ಒಂದು ದಿನ ರಾತ್ರಿ, ಕಳ್ಳತನಕ್ಕೆಂದು ಹೊರಡುವ ಮುನ್ನ ಕಳ್ಳ ತನ್ನ ಮಗನನ್ನು ತನ್ನ ಜೊತೆ ಕರೆದುಕೊಂಡು ಹೊರಟ. ನಗರದ ಮಧ್ಯ ಭಾಗದಲ್ಲಿದ್ದ ಸಾಹುಕಾರನೊಬ್ಬನ ಮನೆಯನ್ನು ದೋಚಲು, ಸಾಹುಕಾರನ ಮನೆಯ ಹಿಂಬಾಗದ ಪೊದೆಯಲ್ಲಿ ಅಪ್ಪ ಮಗ ಅವಿತು ಕುಳಿತು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. [...]
ಇಬ್ಬರು ತುಂಟ ಸಹೋದರರು ತರಲೆ ಮಾಡುವುದರಲ್ಲಿ ಪ್ರಸಿದ್ದಿ. ಊರಿನ ಯಾವುದೇ ತರಲೆ ಕೆಲಸದಲ್ಲಿ ಇಬ್ಬರು ಸಹೋದರರ ಪಾತ್ರವಿದ್ದೆ ಇರುತಿತ್ತು. ಹುಡುಗರ ಅಪ್ಪ ಅಮ್ಮ ಮಕ್ಕಳನ್ನು ಹತೋಟಿಯಲ್ಲಿಡಲು ಮಾಡಿದ ಪ್ರಯತ್ನಗಳೆಲ್ಲಾ ನೀರು ಪಾಲಾಗಿದ್ದವು. ಹೀಗಿರುವಾಗ ಪಕ್ಕದ ಊರಿಗೆ ಸ್ವಾಮೀಜಿಯೊಬ್ಬರು ಬಂದಿದ್ದು, ಅವರು ಇಂತ ತುಂಟ ಹುಡುಗರಿಗೆ ಬುದ್ದಿ ಕಲಿಸುತ್ತಾರೆಂದು ತಿಳಿದ ಮಕ್ಕಳ ತಾಯಿ, ಸ್ವಾಮೀಜಿಯನ್ನು ನೋಡಲು ಹೋದರು. ಸ್ವಾಮೀಜಿ ತಾಯಿಯ ಮಾತನ್ನೆಲ್ಲ ಕೇಳಿದ ಮೇಲೆ, ತನ್ನ ಬಳಿ ಚಿಕ್ಕ ಮಗನನ್ನು ಕಳುಹಿಸಲು ಹೇಳಿದರು. ಚಿಕ್ಕ ಹುಡುಗ ಸ್ವಾಮೀಜಿಯನ್ನು ನೋಡಲು [...]
ಚಾಚಾ ನೆಹರೂ ಮಕ್ಕಳಿಗಾಗಿ ಬರೆದ ಪತ್ರವೊಂದರ ಬಗ್ಗೆ ರೂಪಶ್ರೀ ಯವರು ಬರೆದ ಲೇಖನವನ್ನು ಇಲ್ಲಿ ಮರುಪ್ರಕಟಿಸಲಾಗಿದೆ. ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, “ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು” ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ [...]
ಭಾಷಣ ಮಾಡುವುದು ಒಂದು ಕಲೆ, ಅದು ಚಿಕ್ಕಂದಿನಿಂದಲೇ ಬೆಳೆದರೆ ಉತ್ತಮ. ಇನ್ನೊಬ್ಬರು ಹೇಳಿದ್ದನ್ನು ಬರೆದುಕೊಂಡು ಹೋಗಿ ವೇದಿಕೆಯ ಮೇಲೆ ಓದುವುದನ್ನ ಭಾಷಣವೆನ್ನಲಾಗದು. ವಿಷಯವನ್ನು ಮೊದಲು ಅರ್ಥ ಮಾಡಿಕೊಂಡು, ವೇದಿಕೆಯ ಮೇಲೆ ತನಗೆ ಅರ್ಥವಾದದ್ದನ್ನು ಇತರರಿಗೂ ಅರ್ಥವಾಗುವಂತೆ ಹೇಳುವುದು ಮುಖ್ಯ. ಬಾಲವನದ ಪುಟ್ಟ ಸ್ನೇಹಿತನಾದ ವಿಪಿನ ನಾಲ್ಕು ವರುಷದವನಗಿದ್ದಾಗ ಮಕ್ಕಳ ದಿನಾಚರಣೆಯ ದಿನದಂದು ಮಾಡಿದ ಭಾಷಣವನ್ನ ಕೆಳಗೆ ಕೊಟ್ಟಿದ್ದೇನೆ. ಮಕ್ಕಳ ದಿನ ಇಂದು ನವೆಂಬರ್ ೧೪, ಮಕ್ಕಳ ದಿನ. ಮಕ್ಕಳನ್ನು ತುಂಬಾ ಪ್ರೀತಿಸುತಿದ್ದ, ನಮ್ಮ ದೇಶದ ಮೊದಲ ಪ್ರಧಾನಿ [...]