Author Archives:

ಒಗಟುಗಳು

ಅಜ್ಜಿಗೊಂದು ಅಂಗಿ ಅಂಗಿಯೊಳಗೆ ಮೀಸೆ ಮೀಸೆ ಬಿಡಿಸೆ ಹಲ್ಲು ಹಲ್ಲು ಕಡಿಯೆ ಹಿಟ್ಟು ಹಿಟ್ಟು ತಟ್ಟೆ ರೊಟ್ಟಿ (ಉತ್ತರ: ಮುಸುಕಿನ ಜೋಳ) ಅಂಕು ಡೊಂಕು ಬಾವಿ ಶಂಖ ಚಕ್ರದ ಬಾವಿ ಬೊಮ್ಮಯ್ಯ ಕಟ್ಟಿಸಿದ ಬಾವಿ ಇಣುಕಿ ನೋಡಿದರೆ ಒಂದು ತೊಟ್ಟೂ ನೀರಿಲ್ಲಾ (ಉತ್ತರ: ಕಿವಿ) ಕೆರೆಯೆಲ್ಲಾ ಕುರಿ ಹೆಜ್ಜೆ (ಉತ್ತರ: ನಕ್ಷತ್ರಗಳು)

ಗಾದೆಗಳು

ಅಲ್ಲಾಡೋ ಹಲ್ಲಿನ ಮೇಲೆ ಹಲಗೆ ಬಿದ್ದಂತೆ ಎಮ್ಮೆಗೆ ಎರಡು ಕೋಡು ಹೆಮ್ಮೆಗೆ ಎಂಟು ಕೋಡು ಕೋಪ ಬಂದಾಗ ತಡಕೊಂಡವನೇ ಜಾಣ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಕೂಳು ಚೆಲ್ಲಿದ ಕಡೆ ಸಾವಿರ ಕಾಗೆ ಚಾಡಿಕೋರನಿಗೆ ಊರೆಲ್ಲಾ ನೆಂಟರು ಚಿಂತೆಯೇ ಮುಪ್ಪು, ಸಂತೋಷವೇ ಯೌವನ ತಾನು ಕಳ್ಳಾನಾದರೆ ಪರರ ನಂಬ ತರ್ಕಾ ಮಾಡುವವ ಮೂರ್ಖರಿಗಿಂತ ಕಡೆ ಮಾಡಿದ್ದುಣ್ನೋ ಮಹರಾಯ ಮಳೆಗೆ ಹೆದರಿ ಹೊಳೆಗೆ ಬಿದ್ದ ಹಾಗೆ ಮಾತು ಬಂದಾಗ ಸೋತು ಹೋದವನೇ ಜಾಣ ಯಾವ ರಾಯ ರಾಜನಾದರೂ ರಾಗಿ [...]

ಆನೆ ಬಂತೊಂದಾನೆ

ಆನೆ ಬಂತೊಂದಾನೆ ಯಾವೂರ ಆನೆ? ಬಿಜಾಪುರ ಆನೆ ಇಲ್ಲಿಗ್ಯಾಕ ಬತ್ತು? ಹಾದಿ ತಪ್ಪಿ ಬತ್ತು ಹಾದಿಗೊಂದು ಕೊಬ್ರಿ ಬೀದಿಗೊಂದು ಕೊಬ್ರಿ ಲಟ ಲಟ ಮುರಿತು ಪಟ ಪಟ ತಿಂತು ಕೃಪೆ : ಅಮಿತ್ ಬಿರಾದರ್

ಅಲ್ಲಮ ಪ್ರಭುಗಳ ವಚನಗಳು

ಅಲ್ಲಮ ಪ್ರಭುಗಳ ವಚನಗಳು ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ ! ಎತ್ತಣ ಮಾಮರ ಎತ್ತಣ ಕೋಗಿಲೆ ? ಎತ್ತಣಿಂದೆತ್ತ ಸಂಬಂಧವಯ್ಯ ?! ಬೆಟ್ಟದ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ ?! ಗುಹೇಶ್ವರಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ ?! ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವಿರಯ್ಯ ! ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ ? ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ [...]

ಬಸವಣ್ಣನವರ ವಚನಗಳು

ಬಸವಣ್ಣನವರ ವಚನಗಳು ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವಾ. ಮಾಡಿದೆನೆನ್ನದಿರ ಲಿಂಗಕೆ ನೀಡಿದೆನೆನ್ನದಿರ ಜಂಗಮಕೆ ಮಾಡುವ ನೀಡುವ ನಿಜಗುಣವುಳ್ಳವರ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ ಮಾಡಿದೆನೆಂಬುದು ಮನದಲಿ ಹೊಳೆದರೆ [...]

ತೋಳ ಮತ್ತು ಕುರಿ

ಒಮ್ಮೆ ಬೆಟ್ಟದ ಮಧ್ಯದಲ್ಲಿ ಹರಿಯುತ್ತಿದ್ದ ತೊರೆಯ ಬಳಿ ತೋಳವೊಂದು ನೀರು ಕುಡಿಯಲು ಬಂತು. ನೀರು ಕುಡಿದು ತಲೆಯೆತ್ತಿದ ತೋಳನಿಗೆ, ಕುರಿ ಮರಿಯೊಂದು ಕೆಳಗಡೆ ನೀರು ಕುಡಿಯುತಿದ್ದು ಕಾಣಿಸಿತು. ತೋಳನ ಬಾಯಲ್ಲಿ ನೀರು, ನನ್ನ ರಾತ್ರಿ ಊಟ ಸಿಕ್ಕಿತೆಂದುಕೊಂಡು, ಕುರಿಗೆ “ನೀನು ನಾನು ಕುಡಿಯುವ ನೀರನ್ನು ಗಲೀಜು ಮಾಡುತಿದ್ದೀಯ” ಎಂದು ಗದರಿ ಕೇಳಿತು. ಅದಕ್ಕೆ ಕುರಿ ಮರಿ, “ಇಲ್ಲಪ್ಪ ದೊರೆ ಇಲ್ಲ, ನೀರು ನೀನು ಇರುವಲ್ಲಿಂದ ನನ್ನ ಕಡೆ ಬರುತ್ತಿದೆ, ಹಾಗಾಗಿ ನಾನು ನಿನ್ನ ನೀರನ್ನು ಗಲೀಜು ಮಾಡುತ್ತಿಲ್ಲ” [...]

Follow

Get every new post delivered to your Inbox.