ಅಲ್ಲಾಡೋ ಹಲ್ಲಿನ ಮೇಲೆ ಹಲಗೆ ಬಿದ್ದಂತೆ
ಎಮ್ಮೆಗೆ ಎರಡು ಕೋಡು ಹೆಮ್ಮೆಗೆ ಎಂಟು ಕೋಡು
ಕೋಪ ಬಂದಾಗ ತಡಕೊಂಡವನೇ ಜಾಣ
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಕೂಳು ಚೆಲ್ಲಿದ ಕಡೆ ಸಾವಿರ ಕಾಗೆ
ಚಾಡಿಕೋರನಿಗೆ ಊರೆಲ್ಲಾ ನೆಂಟರು
ಚಿಂತೆಯೇ ಮುಪ್ಪು, ಸಂತೋಷವೇ ಯೌವನ
ತಾನು ಕಳ್ಳಾನಾದರೆ ಪರರ ನಂಬ
ತರ್ಕಾ ಮಾಡುವವ ಮೂರ್ಖರಿಗಿಂತ ಕಡೆ
ಮಾಡಿದ್ದುಣ್ನೋ ಮಹರಾಯ
ಮಳೆಗೆ ಹೆದರಿ ಹೊಳೆಗೆ ಬಿದ್ದ ಹಾಗೆ
ಮಾತು ಬಂದಾಗ ಸೋತು ಹೋದವನೇ ಜಾಣ
ಯಾವ ರಾಯ ರಾಜನಾದರೂ ರಾಗಿ ಬೀಸೋದು ತಪ್ಪದು
ಸತ್ಯವಿದ್ದರೆ ಎತ್ತಲೂ ಭಯವಿಲ್ಲ
ಸಮುದ್ರ ದೊಡ್ಡದಾದರೂ ಪಾತ್ರೆ ಇದ್ದಷ್ಟೇ ನೀರು ಸಿಕ್ಕೀತು
ಹೊಳೆಗೆ ನೆನೆಯದ ಕಲ್ಲು ಮಳೇಗೆ ನೆನೆದೀತೇ?
ಹೋಗದ ಊರಿಗೆ ದಾರಿ ಕೇಳಿದ ಹಾಗೆ