ಕೊಳಿಕೆರಂಗ
ರಚನೆ : ಟಿ.ಪಿ.ಕೈಲಾಸಂ
ನಾನುಟ್ಟಿದ್ ವಡ್ಡ್ರಳ್ಳಿ
ಬೆಳೆದಿದ್ದು ಬ್ಯಾಡ್ರಳ್ಳಿ
ಮದುವೆ ಮಾದನ್ ಒಲ್ಗೊಳಾರ್ನಳ್ಳಿ
ನಮ್ ಶ್ಯಾನಭೊಗಯ್ಯ ಅಲ್ದೆ ಶೇಖದಾರಪ್ಪ
ಇವರೆಲ್ಲ ಕಂಡವ್ರೆ ನನ್ನ್
ನನ್ನೆಲ್ಡು ಮಕ್ಕಳ್ನು ಎಂಡ್ರ್ನುವೆ
ಅಟ್ಟಿ ಅವ್ವೇನು ಬಿಟ್ಟಿವ್ನೀ ನಾ
ನಿಮ್ಮುಂದೆ ನಿಂತೀವ್ನಿ ನಾ
ನಮ್ಮಳ್ಳಿ ಕಿಲಾಡಿ ಉಂಜ
ನಾನು ಕೊ….ಳಿಕೆರಂಗ
ನಾನು ಕೊ….ಳಿಕೆರಂಗ
ಕೊನುಳಿನುಕೆನುರನುಸೊನ್ನೆಯುನುಗ
ನಾನು ಕೊ….ಳಿಕೆರಂಗ
ನಮ್ ತಿಪ್ಪಾರಳ್ಳಿ ಬೊರನ್ ಅಣ್ಣನ್ ತಮ್ಮನ್ ದೊಡ್ಡ್ಮಗ
ಕಕೊತ್ವಳಿ ಕಕೆತ್ವರ ಮತ್ ಸೊನ್ನೆಯುನುಗ
ಇದನ್ ಒದಕ್ ಬರ್ದೆ ಬಾಯ್ ಬಿಡೊನು ಬೆಪ್ ನನ್ನ್ಮಗ
ಎತ್ತು ಕುದುರೆ ಇಲ್ಲದ್ ಗಾಡಿಗಳು
ಎಣ್ಣೆ ಬತ್ತಿ ಇಲ್ಲದ್ ದೀಪಗಳು
ತುಂಬಿದ್ ಮೈಸೂರಿಗ್ ಬಂದೆ
ದೊಡ್ ಗಡಿಯಾರದ ಹಿಂದೆ
ದೊಡ್ ಚೌಕದ ಮುಂದೆ
ಕಟ್ತ್ಂದಿದ್ ಬುತ್ತಿನ ತಿಂತಿದ್ದೆ
ಅಲ್ಲೆ ಕುದ್ರೆಮೇಲೆ ಕುಂತಿದ್ದೊಬ್ಬ ಸಾವರಯ್ಯ
ಕೆದರಿದ್ ತನ್ ಮೀಸೆ ಮೆಲೆ ಹಾಕ್ದ ಕಯ್ಯ
ಗದರಿಸ್ತಾಲಿ ನನ್
ಬೆದರಿಸ್ತಾಲಿ
ಏ ನೀನ್ ಯಾರು ನೀನ್ ಯಾಕೊ
ನಾನ್ ನಾನು ಕೋಳಿಕೆ ರಂಗ
ನಾನು ಕೊ….ಳಿಕೆರಂಗ
ಕೊನುಳಿನುಕೆನುರನುಸೊನ್ನೆಯುನುಗ
ನಾನು ಕೊ….ಳಿಕೆರಂಗ
ನಮ್ ತಿಪ್ಪಾರಳ್ಳಿ ಬೊರನ್ ಅಣ್ಣನ್ ತಮ್ಮನ್ ದೊಡ್ಡ್ಮಗ
ಕಕೊತ್ವಳಿ ಕಕೆತ್ವರ ಮತ್ ಸೊನ್ನೆಯುನುಗ
ಇದನ್ ಒದಕ್ ಬರ್ದೆ ಬಾಯ್ ಬಿಡೊನು ಬೆಪ್ ನನ್ನ್ಮಗ