ಮುಂದೆ ಹೋಗು ಎನ್ನುವ ಹಕ್ಕು
ಒಮ್ಮೆ ಬಿಕ್ಷುಕನೊಬ್ಬ ಒಂದು ಮನೆಯ ಮುಂದೆ ನಿಂತು ಬಿಕ್ಷಾ ಎಂದು ಕೂಗಿದಾ. ಆಗ ಆ ಮನೆಯ ಸೊಸೆ ಬಾಗಿಲಿಗೆ ಬಂದು ಮುಂದೆ ಹೋಗು ಎಂದು ಗದರಿದಳು. ಆಗ ಮನೆಯೊಳಗಿದ್ದ ಅತ್ತೆ, ನೀನು ಯಾರೆ ಬಿಕ್ಷುಕನ್ನ ಮುಂದೆ ಹೋಗು ಎನ್ನುವುದಕ್ಕೆ, ನಾನು ಈ ಮನೆಯ ಯಜಮಾನತಿ ಎಂದು ಕೂಗಿಕೊಂಡು ಮನೆಯ ಬಾಗಿಲಿಗೆ ಬಂದಳು. ಅವಮಾನಿತಳಾದ ಸೊಸೆ ಮನೆಯೊಳಗೆ ಅಳುತ್ತಾ ಒಡಿಹೊದಳು. ಇದನ್ನು ಕಂಡ ಬಿಕ್ಷುಕ, ಅತ್ತೆಯೊಡನೆ ಸಂಭಾಷಣೆ ಬೆಳೆಸುತ್ತಾ, ನೀವು ಈ ಮನೆಯ ಯಜಮಾನಿ ಎಂದು ತಿಳಿಯದೆ ಆಕೆ ಯನ್ನು ಕೇಳಿದೆ. ದಯವಿಟ್ಟು ಎನಾದರೂ ಬಿಕ್ಷೇ ಹಾಕಿ ತಾಯೇ ಎಂದಾಗ. ಅತ್ತೆ, ನಿನಗೆ ನಾನು ಏನೂ ಬಿಕ್ಷೇ ಹಾಕುವುದಿಲ್ಲ ಮುಂದೆ ಹೊಗು ಎಂದು ಅರಚಿದಳು.
Categories: ಜನಪದ ಕತೆ-ಗೀತೆಗಳು