
ಕವಿ : ಜಿ.ಪಿ.ರಾಜರತ್ನಂ
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಯಾಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೆ ಎನು ಮಾಡುವೆ
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
ನನ್ನಿಷ್ಟದ ಪದ್ಯಗಳಲ್ಲೊಂದು
ನಾಲ್ಕನೇ ಸಾಲಿನಲ್ಲಿ “ತಿಂಡಿ” ಇಲ್ಲ.. “ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು” ಅಷ್ಟೆ ಎಂಬುದು ನನ್ನ ನೆನಪು..
ಹರೀಶ್ ರವರೆ,
ನೀವು ಹೇಳಿದಂತೆ ನಾಲ್ಕನೇ ಸಾಲನ್ನು ಸರಿ ಪಡಿಸಿದ್ದೇನೆ.
ಧನ್ಯವಾದಗಳು
-ಬಾಲ.
naavu kone saalanna- “taa itta ninna maneya naanu kaayuve” anta helta idwi
chi ಅವರೆ
“ತಾ ಇತ್ತ ನಿನ್ನ ಮನೆಯ ನಾನು ಕಾಯುವೆ”, ಹಾಡಿನ ಲಯಕ್ಕೆ ಹೊಂದುವುದಿಲ್ಲ.
ಧನ್ಯವಾದಗಳು
-ಬಾಲ